ಸಿಡಬ್ಲ್ಯೂಸಿ ಸಭೆ ಮುಗಿಸಿಕೊಂಡು ಹೊರಬಂದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!

|

Updated on: Jun 08, 2024 | 6:45 PM

ಮಾಧ್ಯಮದವರು, ಹಾಗಲ್ಲ ಸರ್, ನಿಮ್ಮ ಹೇಳಿಕೆ ನಮಗೆ ಇಂಪಾರ್ಟಂಟು ಅಂದಾಗ, ಬೇಡ ಕಣ್ರಯ್ಯ ಅವರೊಂದು ಹೇಳೋದು ನಾನೊಂದು ಹೇಳೋದು ಅಗುತ್ತೆ ಅನ್ನುತ್ತಾರೆ. ಅದರೂ ಬೆಂಬಿಡದ ಪತ್ರಕರ್ತರು ಸರ್ ಸರ್ ಅಂತ ಹತ್ತಿರಕ್ಕೆ ಹೋದಾಗ, ನೋ ಎನ್ನುವಂತೆ ಕೈಯೆತ್ತಿ ಕಾರಿನ ಕಡೆ ಹೋಗುತ್ತಾರೆ.

ನವದೆಹಲಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇವತ್ತು ರಾಷ್ಟ್ರದ ರಾಜಧಾನಿಯಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (CWC meeting) ಭಾಗವಹಿಸಲು ಇಂದು ಅವರು ತಮ್ಮ ಡೆಪ್ಯುಟಿ ಡಿಕೆ ಶಿವಕುಮಾರ್ (DK Shivakumar) ಜೊತೆ ದೆಹಲಿಗೆ ಬಂದಿದ್ದಾರೆ. ಸಭೆ ಮುಗಿಸಿಕೊಂಡು ಹೊರಬಂದಾಗ ಅವರು ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ಮುಗುಳ್ನಗುತ್ತಾರೆಯೇ ಮಾತಾಡುವ ಗೋಜಿಗೆ ಹೋಗಲ್ಲ. ಮೀಟಿಂಗ್ ಏನೆಲ್ಲ ಚರ್ಚೆ ನಡೆಯಿತು ಅಂತ ಕೇಳಿದಾಗ ಎಐಸಿಸಿ ಕಚೇರಿ ಕಡೆ ಕೈ ತೋರಿಸಿ, ಹೇಗೂ ಅವರೊಂದಿಗೆ ನೀವು ಮಾತಾಡ್ತೀರಲ್ಲ, ಅವರೇ ಎಲ್ಲ ಹೇಳ್ತಾರೆ ಅನ್ನುತ್ತಾರೆ. ಮಾಧ್ಯಮದವರು, ಹಾಗಲ್ಲ ಸರ್, ನಿಮ್ಮ ಹೇಳಿಕೆ ನಮಗೆ ಇಂಪಾರ್ಟಂಟು ಅಂದಾಗ, ಬೇಡ ಕಣ್ರಯ್ಯ ಅವರೊಂದು ಹೇಳೋದು ನಾನೊಂದು ಹೇಳೋದು ಅಗುತ್ತೆ ಅನ್ನುತ್ತಾರೆ. ಅದರೂ ಬೆಂಬಿಡದ ಪತ್ರಕರ್ತರು ಸರ್ ಸರ್ ಅಂತ ಹತ್ತಿರಕ್ಕೆ ಹೋದಾಗ, ನೋ ಎನ್ನುವಂತೆ ಕೈಯೆತ್ತಿ ಕಾರಿನ ಕಡೆ ಹೋಗುತ್ತಾರೆ. ಆಮೇಲೆ ಕಾರು ಹತ್ತಿ ಫುಟ್ ಬೋರ್ಡ್ ಮೇಲೆ ನಿಂತು ಚುನಾವಣಾ ಪ್ರಚಾರದಲ್ಲಿ ಮತದಾರರ ಕಡೆ ಕೈ ಬೀಸುವ ಹಾಗೆ ಮಾಧ್ಯಮದವರ ಕಡೆ ಕೈ ಅಲ್ಲಾಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಅಸಮಂಜಸ ಪ್ರತಿಕ್ರಿಯೆ ನೀಡಿದರು!