Kantara Chapter 1 Interview: ಕಾಂತಾರದ ಫಸ್ಟ್ ಕ್ರೆಡಿಟ್ ಕನ್ನಡಿಗರಿಗೆ! ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ ರಿಷಬ್ ಶೆಟ್ಟಿ

Updated on: Sep 27, 2025 | 6:35 PM

ಕಾಂತಾರ ಚಾಪ್ಟರ್ 1, ರಿಷಬ್ ಶೆಟ್ಟಿ ಸಂದರ್ಶನ: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಭರದಿಂದ ತೊಡಗಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ‘ಟವಿ9’ ಸ್ಟುಡಿಯೋಗೆ ಆಗಮಿಸಿ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಾಂತಾರ ಸಿನಿಮಾದ ಯಶಸ್ಸಿನ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಆ ಮಾತುಗಳು ಇಲ್ಲಿವೆ.

‘ಕಾಂತಾರದ ಫಸ್ಟ್ ಕ್ರೆಡಿಟ್ ಕನ್ನಡಿಗರಿಗೇ ಸಲ್ಲಬೇಕು. ಕನ್ನಡಿಗರು ಚಿತ್ರವನ್ನು ಹೇಗೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು ಎಂಬುದನ್ನು ನೀವೆಲ್ಲ ನೋಡಿಯೇ ಇದ್ದೀರಿ’. ಹೀಗೆಂದು ಕನ್ನಡಿಗರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದು ನಟ, ನಿರ್ದೇಶಕ ರಿಷಬ್ ಶೆಟ್ಟಿ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ಕನ್ನಡ ಸೇರಿದಂತೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ದೇಶದಾದ್ಯಂತ ಬಿಡುಗಡೆ ಆಗಲಿದ್ದು, ಈ ವಿಚಾರವಾಗಿ ಮತ್ತು ಕಾಂತಾರ ಸಿನಿಮಾ ಯಶಸ್ಸಿನ ಬಗ್ಗೆ ‘ಟಿವಿ9’ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಸಂದರ್ಶನದ ವಿಡಿಯೋ ಇಲ್ಲಿ ನೋಡಿ.

ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 27, 2025 06:20 PM