ಕರ್ನಾಟಕ ಬಂದ್​ಗೆ ಸ್ಟಾರ್ ಕಲಾವಿದರು ಸಾಥ್ ನೀಡ್ತಾರಾ? ಸಾರಾ ಗೋವಿಂದು ಪ್ರತಿಕ್ರಿಯೆ

|

Updated on: Mar 03, 2025 | 4:15 PM

ಕರ್ನಾಟಕ ಬಂದ್​ಗೆ ಮಾ.22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಅದಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಬೆಂಬಲ ನೀಡ್ತಾರಾ ಇಲ್ಲವಾ ಎಂಬ ಪ್ರಶ್ನೆ ಮೂಡಿವೆ. ಈ ಕುರಿತು ಸಾರಾ ಗೋವಿಂದು ಮಾತನಾಡಿದ್ದಾರೆ. ‘ನಾನು ಇನ್ನೂ ಯಾರನ್ನೂ ಭೇಟಿಯಾಗಿಲ್ಲ. ಒಂದು ಸಭೆ ಕರೆಯುತ್ತೇವೆ. ಕಲಾವಿದರು, ಪ್ರದರ್ಶಕರು, ನಿರ್ಮಾಪಕರು, ಹಂಚಿಕೆದಾರರು ಎಲ್ಲರನ್ನೂ ಸೇರಿಸಿ ಬಂದ್ ಮಾಡಬೇಕು’ ಎಂದು ಅವರು ಹೇಳಿದ್ದಾರೆ.

ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ (Karnataka Bandh) ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಆದರೆ ಇದಕ್ಕೆ ಚಿತ್ರರಂಗದ ಸ್ಟಾರ್ ಕಲಾವಿದರು ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆ ಮೂಡಿವೆ. ಈ ಬಗ್ಗೆ ಸಾರಾ ಗೋವಿಂದು ಅವರು ಮಾತನಾಡಿದ್ದಾರೆ. ‘ಇನ್ನೂ ಯಾರನ್ನೂ ನಾನು ಭೇಟಿ ಆಗಿಲ್ಲ. ಅದಕ್ಕಾಗಿ ಒಂದು ಸಭೆಯನ್ನು ಕರೆಯುತ್ತೇವೆ. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು, ಹಂಚಿಕೆದಾರರು ಸೇರಿದಂತೆ ಎಲ್ಲರನ್ನೂ ಸೇರಿಸಿ ಬಂದ್ ಮಾಡಬೇಕು. ಅವರೆಲ್ಲ ಕೈ ಜೋಡಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ಸಾರಾ ಗೋವಿಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.