ಕರ್ನಾಟಕ ಬಂದ್: ಮಾ 22ರಂದು ಶಾಲಾ-ಕಾಲೇಜು ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾರ್ಚ್ 22 ರಂದು MES ಮತ್ತು ಶಿವಸೇನೆಯಿಂದ ಬಂದ್ ಹಿನ್ನೆಲೆಯಲ್ಲಿ ಕರ್ನಾಟಕದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ಶಿಕ್ಷಣ ಸಚಿವರು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಅಡ್ಡಿ ಬಂದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಗೃಹ ಇಲಾಖೆಯೊಂದಿಗೆ ಚರ್ಚಿಸಿ ನಾಳೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 20: ಎಂಇಎಸ್, ಶಿವಸೇನೆ ಪುಂಡಾಟ ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ (Karnataka Bandh) ಹಿನ್ನೆಲೆ ಶಾಲಾ-ಕಾಲೇಜುಗಳ ರಜೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನಾಳೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಟಿವಿ9ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶನಿವಾರ ಎಸ್ಎಸ್ಎಲ್ಸಿ ಪರೀಕ್ಷೆ ಇಲ್ಲ. ಸಾರ್ವಜನಿಕ ವಾಹನ ಇಲ್ಲದೆ ಇದ್ದರೆ ಮಕ್ಕಳಿಗೆ ತೊಂದರೆ ಆಗುತ್ತೆ. ಗೃಹ ಇಲಾಖೆ ಜೊತೆ ಚರ್ಚೆ ನಡೆಸಿ ನಾಳೆ ತೀರ್ಮಾನ ಮಾಡುತ್ತೇವೆ. ಬಂದ್ಗೆ ಸಾರಿಗೆ ಬೆಂಬಲ ಕೊಟ್ಟರೆ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
