AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಕಸದಿಂದ ಕಾಸು?  ಬಹುದೊಡ್ಡ ಹಗರಣವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್

ಏನಿದು ಕಸದಿಂದ ಕಾಸು? ಬಹುದೊಡ್ಡ ಹಗರಣವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್

ಹರೀಶ್ ಜಿ.ಆರ್​.
| Edited By: |

Updated on: Jun 10, 2026 | 3:04 PM

Share

ಬೆಂಗಳೂರಿನಲ್ಲಿ ಕಸದ ಟೆಂಡರ್​​ನಲ್ಲಿ ಬಾರೀ ಅಕ್ರಮ ನಡೆದಿದೆ ಎಂದು ವಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ದೂರು ನೀಡಿದೆ. ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಇಂದು (ಜೂನ್ 10) ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದಾರೆ. 36 ಸಾವಿರ ಕೋಟಿ ರೂಪಾಯಿ ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು, (ಜೂನ್ 10): ಬೆಂಗಳೂರಿನಲ್ಲಿ ಕಸದ (bengaluru garbage) ಟೆಂಡರ್​​ನಲ್ಲಿ ಬಾರೀ ಅಕ್ರಮ ನಡೆದಿದೆ ಎಂದು ವಿಪಕ್ಷ ಬಿಜೆಪಿ (BJP) ಗಂಭೀರ ಆರೋಪ ಮಾಡಿದ್ದು, ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ರಾಜ್ಯಪಾಲರಿಗೆ ದೂರು ನೀಡಿದೆ. ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಇಂದು (ಜೂನ್ 10) ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದಾರೆ. 36 ಸಾವಿರ ಕೋಟಿ ರೂಪಾಯಿ ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕರ ಆರ್ ಅಶೋಕ್, ರಾಮ್‌ಕಿ ಕಂಪನಿಯನ್ನು ವರ್ಲ್ಡ್ ಬ್ಯಾಂಕ್ ಡಿಬಾರ್ ಮಾಡಿದೆ.ರಾಜ್ಯದಲ್ಲೂ ಬಿಬಿಎಂಪಿ ಇದ್ದಾಗ ರಾಮ್‌ಕಿ ಕಂಪನಿಯನ್ನು 2016 ರಲ್ಲಿ ಟರ್ನಿನೇಟ್ ಮಾಡಿತ್ತು. ಬ್ಲಾಕ್‌ಲಿಸ್ಟ್ ಕಂಪನಿ ರಾಮ್‌ಕಿ ಗೆ ಕಸದ ಟೆಂಡರ್ ಕೊಡಲು ದೆಹಲಿಯಿಂದ ಕರೆ ಬಂದಿದ್ದು, ಬಳಿಕ ಕಳೆದ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಕೊನೆಯದಾಗಿ ಅಜೆಂಡಾದಲ್ಲಿ ಸೇರಿಸಿ ಒಪ್ಪಿಗೆ ಪಡೀತಾರೆ. ಸಚಿವ ಸಂಪುಟದಲ್ಲಿದ್ದ ಸಚಿವರು 36 ಸಾವಿರ ಕೋಟಿ ಕಸದ ಟೆಂಡರ್ ವಿಷಯ ಕೇಳಿ ಗಾಬರಿಯಾಗಿದ್ದು, ಆಗ ಸಿದ್ದರಾಮಯ್ಯ ಇದು ಹೈಕಮಾಂಡ್ ನಿಂದ ಬಂದಿರೋದು ಅಂತಾರೆ. ಇದು ಟೆಂಡರ್ ಆದ್ರೆ ಗೋವಿಂದ ಆಗುತ್ತೆ ಅಂತ ಸಚಿವರು ಹೇಳಿದ್ರೂ ಸಂಪುಟದಲ್ಲಿ ಅನುಮೋದನೆ ಸಿಗುತ್ತೆ. ರಾಮ್‌ಕಿ ಕಂಪೆನಿಗೆ ಕಸದ ಟೆಂಡರ್ ಕೊಡುವ ಬಗ್ಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಿದ್ದರಾಮಯ್ಯ ರಚಿಸಿದ್ದ ಸಮಿತಿ ರದ್ದು ಮಾಡಿ ಡಿಕೆಶಿ ಬೇರೊಂದು ಸಮಿತಿ ರಚಿಸಿದ್ದಾರೆ. ಒಂದು ವಾರದೊಳಗೆ ವರದಿ ಕೊಡಲಯ ಹೇಳಿದ್ದಾರೆ. ಇದು ಕಸದಿಂದ ಕಾಸು ಮಾಡುವ ಗೋಲ್ಡನ್ ಸ್ಕೀಂ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಸದ ಟೆಂಡರ್​​ನಲ್ಲಿ ಅಕ್ರಮ ಆರೋಪ: ರಾಜ್ಯಪಾಲ ಗೆಹ್ಲೋಟ್​ಗೆ ಬಿಜೆಪಿ ನಿಯೋಗದಿಂದ ದೂರು

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More