ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ, ದಾವಣಗೆರೆಯಲ್ಲಿ ಗುಪ್ತ್ ಗುಪ್ತ್ ಸಭೆ
ಒಂದೆಡೆ ಆಡಳಿತರೂಢ ಕಾಂಗ್ರೆಸ್ಗೆ ಮುಡಾ ಹಗರಣ ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಹೌದು.. ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹಠಾವೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿರೋಧಿ ಬಣದ ಶಾಸಕರು, ನಾಯಕರು ಗುಪ್ತ್ ಗುಪ್ತ್ ಸಭೆ ನಡೆಸುತ್ತಿದ್ದಾರೆ.
ದಾವಣಗೆರೆ, (ಸೆಪ್ಟೆಂಬರ್, 29): ಕರ್ನಾಟಕ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಹಠಾವೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿವೈ ವಿಜಯೇಂದ್ರ ವಿರೋಧಿ ಶಾಸಕರು ಹಾಗೂ ನಾಯರು ಪದೇ ಪದೇ ಪ್ರತ್ಯೇಕ ಸಭೆ ಮಾಡುತ್ತಲೇ ಇದ್ದಾರೆ. ಇತ್ತೀಚಗೆ ಬೆಳಗಾವಿಯಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿತ್ತು, ಇದಾದ ಮೇಲೆ ಕುಮಾರ್ ಬಂಗಾರಪ್ಪ ಹಾಗೇ ಬಿಜೆಪಿ ಉಚ್ಚಾಟಿತ ನಾಯಕ ಕೆಎಸ್ ಈಶ್ವರಪ್ಪ ನಿವಾಸದಲ್ಲಿ ರೆಬೆಲ್ ನಾಯಕರು ಸಭೆ ನಡೆಸಿದ್ದಾರೆ. ಇದೀಗ ಇಂದು (ಸೆ.29) ದಾವಣಗೆರೆಯಲ್ಲಿ ಗುಪ್ತ್ ಗುಪ್ತ್ ಸಭೆ ನಡೆಸಿದ್ದಾರೆ. ದಾವಣಗೆರೆ ನಗರದ ಜಿಎಂಐಟಿ ಕಾಲೇಜ್ ಅತಿಥಿ ಗೃಹದಲ್ಲಿ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿಎಂ ಸಿದ್ದೇಶ್ವರ, ಹರಿಹರ ಬಿಜೆಪಿ ಶಾಸಕ ಬಿ ಪಿ ಹರೀಶ್ ಸೇರಿದಂತೆ ಇತರೆ ರೆಬೆಲ್ ನಾಯಕರು ಇದ್ದರು.
Latest Videos