ಮೊಮ್ಮಗನ ಗೆಲ್ಸಲು ಇಷ್ಟೆಲ್ಲ ಸುಳ್ಳು ಹೇಳ್ತೀರಲ್ರೀ, ಹಾಸನದಲ್ಲಿ ಕಣ್ಣೀರಿದ್ರಾ: ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಶ್ನೆ

|

Updated on: Nov 11, 2024 | 8:59 AM

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಕಿತ್ತುಹಾಕುವ ವರೆಗೂ ನಿದ್ದೆ ಬರಲಾರದು ಎಂಬ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಹೇಳಿಕೆಗೆ ಹಾವೇರಿ ಜಿಲ್ಲೆಯಲ್ಲಿ ಸಿಎಂ ತಿರುಗೇಟು ನೀಡಿದ್ದಾರೆ. ಅಲ್ಲದೆ, ದೇವೇಗೌಡರು, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಣ್ಣಿರಿನ ವಿಚಾರ ಪ್ರಸ್ತಾಪಿಸಿ, ಕಣ್ಣೀರು ಹಾಕುವುದು ಅವರ ಪರಂಪರೆ ಎಂದು ವ್ಯಂಗ್ಯವಾಡಿದ್ದಾರೆ. ವಿಡಿಯೋ ಇಲ್ಲಿದೆ.

ಹಾವೇರಿ, ನವೆಂಬರ್ 11: ಲೋಕಸಭೆಗೆ 2019ರಲ್ಲಿ ನಡೆದಿದದ್ದ ಚುನಾವಣೆಗೂ ಮುನ್ನ, ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಡುತ್ತೇನೆ’ ಎಂದಿದ್ದರು. ಈಗ ಅವರ ಜತೆಗೇ ಸೇರಿಕೊಂಡು, ಕಾಂಗ್ರೆಸ್ ಸರ್ಕಾರ ಕಿತ್ತುಹಾಕುವ ವರೆಗೆ ನಿದ್ದೆ ಮಾಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಶಿಗ್ಗಾಂವಿ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಮೊಮ್ಮಗನನ್ನು ಗೆಲ್ಲಿಸಲು ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

92 ವರ್ಷ ವಯಸ್ಸಿನವರು ನೀವು. ಮನೆಯಲ್ಲಿರಬೇಕಾದವರು ಮೊಮ್ಮಗನ ಗೆಲ್ಲಿಸುವುದಕ್ಕಾಗಿ ಕಣ್ಣೀರು ಹಾಕುತ್ತಿದ್ದೀರಿ. ಇಷ್ಟು ಸುಳ್ಳು ಹೇಳುತ್ತಿದ್ದೀರಿ, ಇದೆಲ್ಲ ಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹೆಚ್​ಡಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಚನ್ನಪಟ್ಟಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಅತ್ತ ಹಾಸನದಲ್ಲಿ ಪ್ರಜ್ವಲರ್ ರೇವಣ್ಣರಿಂದ ಹತ್ತಾರು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಅಲ್ಲಿ ಹೋಗಿ ಕಣ್ಣೀರು ಹಾಕಿದ್ದೀರಾ? ಕಣ್ಣೀರು ಹಾಕುವುದು ಅವರ ಪರಂಪರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ