ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಸರ್ಕಾರವನ್ನು ಗೊಂದಲಕ್ಕೆ ಸಿಲುಕಿಸಿದ ಮತದಾರರ ಪಟ್ಟಿ

Updated on: Nov 05, 2026 | 9:46 PM

ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ರಾಜ್ಯ ಸರ್ಕಾರವನ್ನು ಗೊಂದಲ ಸಿಲುಕಿಸಿದೆ. ಹೌದು...ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಂದು (ನವೆಂಬರ್ 05) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಎಸ್​ಐಆರ್​​ ಪೂರ್ವ ಮತಪಟ್ಟಿ ಬಳಸಬೇಕೋ ಅಥವಾ SIR ಬಳಿಕದ ಪಟ್ಟಿ ಬಳಸಬೇಕೋ ಎನ್ನುವ ಗೊಂದಲಕ್ಕೀಡಾಗಿದೆ.

ಬೆಂಗಳೂರು, (ನವೆಂಬರ್ 05): ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ರಾಜ್ಯ ಸರ್ಕಾರವನ್ನು ಗೊಂದಲ ಸಿಲುಕಿಸಿದೆ. ಹೌದು…ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಂದು (ನವೆಂಬರ್ 05) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಎಸ್​ಐಆರ್​​ ಪೂರ್ವ ಮತಪಟ್ಟಿ ಬಳಸಬೇಕೋ ಅಥವಾ SIR ಬಳಿಕದ ಪಟ್ಟಿ ಬಳಸಬೇಕೋ ಎನ್ನುವ ಗೊಂದಲಕ್ಕೀಡಾಗಿದೆ. ಈ ವೇಳೆ ಆಯೋಗ ನಿರ್ಧರಿಸಲಿ ಎಂದು ಕೆಲ ಸಚಿವರಿಂದ ಸಲಹೆ ನೀಡಿದ್ದರೆ, ಇನ್ನು ಕೆಲವರು, ಬೇರೆ ರಾಜ್ಯಗಳಲ್ಲಾದಂಥ ಲೋಪಗಳು ನಮ್ಮಲ್ಲಿ ಆಗಿಲ್ಲ. ಹಾಗಾಗಿ ಹೊಸ ಮತಪಟ್ಟಿ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಹೀಗೆ ಚರ್ಚೆಯಾದರೂ ಅಂತಿಮವಾಗಿ ಯಾವ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಅಂತಿಮವಾಗಿ ಯಾವ ಪಟ್ಟಿ ಆಧರಿಸಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಗೊಂದಲ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More