AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​ಗೆ ಶುಭಸುದ್ದಿ ಸಿಗುತ್ತೆ ಎಂಬ ಬೆಂಬಲಿಗರ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು ನೋಡಿ!

ಡಿಕೆ ಶಿವಕುಮಾರ್​ಗೆ ಶುಭಸುದ್ದಿ ಸಿಗುತ್ತೆ ಎಂಬ ಬೆಂಬಲಿಗರ ಮಾತಿಗೆ ಮಾಜಿ ಸಚಿವ ರಾಜಣ್ಣ ಏನಂದ್ರು ನೋಡಿ!

ರಾಮ್​, ಮೈಸೂರು
| Edited By: |

Updated on: May 07, 2026 | 11:22 AM

Share

ಸಿಎಂ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಲಿ ಎಂದು ಮೈಸೂರಿನಲ್ಲಿ ಕೆಎನ್ ರಾಜಣ್ಣ ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಡಜನ್ ನಾಯಕರು ಅರ್ಹರಿದ್ದಾರೆ ಎಂದ ಅವರು, ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಮೇಲೆ ಆಸೆ ಇರುವುದು ಸಹಜ ಮತ್ತು ಜಾಸ್ತಿಯೇ ಇದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮೈಸೂರು, ಮೇ 7: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಗೊಂದಲ ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಸಿಎಂ ಆಗುವ ಅರ್ಹತೆಯುಳ್ಳ ಒಂದು ಡಜನ್ ನಾಯಕರಿದ್ದಾರೆ’ ಎಂದು ಹೇಳಿದ್ದಾರೆ. ‘ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಅತಿ ಬೇಗ ಈ ಬಗ್ಗೆ ಜಾಗರೂಕ ನಿರ್ಧಾರ ಕೈಗೊಳ್ಳಲಿ. ಈ ಗೊಂದಲ ಮುಂದುವರಿದಷ್ಟು ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಅವರಿಗೆ ಪರಿಪೂರ್ಣ ಅಧಿಕಾರ ಮುಂದುವರಿಸಿ ಅಂತಾದರೂ ಹೇಳಲಿ ಅಥವಾ ಬದಲಾವಣೆ ಮಾಡುವುದಿದ್ದರೆ ಅದನ್ನಾದರೂ ವರಿಷ್ಠರು ಸ್ಪಷ್ಟಪಡಿಸಲಿ’ ಎಂದು ರಾಜಣ್ಣ ಆಗ್ರಹಿಸಿದರು.

ಇದೇ ವೇಳೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ ಎಂಬ ಅವರ ಬೆಂಬಲಿಗರ ಮಾತಿಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಜೀವನದಲ್ಲಿ ಆಶಾಭಾವನೆ ಇಟ್ಟುಕೊಳ್ಳುವುದು ಸಹಜ. ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು, ಅವರಿಗೆ ಸಿಎಂ ಕುರ್ಚಿ ಮೇಲೆ ಆಸೆ ಇರುವುದು ಸಹಜ ಮತ್ತು ಜಾಸ್ತಿಯೇ ಇದೆ. ಆದರೆ ನಮ್ಮಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಸೇರಿದಂತೆ ಬಹಳ ಜನ ಸಮರ್ಥ ನಾಯಕರಿದ್ದಾರೆ’ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More