ಕೊನೆಗೂ ಕೂಡಿಬಂತು ಟೈಮ್: ರಾಹುಲ್ ಗಾಂಧಿ ಭೇಟಿ ಮಾಡಿದ್ದಕ್ಕೆ ಡಿಕೆಶಿ ಫುಲ್ ಖುಷ್

Updated on: Jan 16, 2026 | 10:54 PM

ಸಂಕ್ರಾಂತಿಗೆ ಸೂರ್ಯ ಪಥ ಬದಲಾಗಿದೆ. ಹಾಗೆಯೇ ಕರ್ನಾಟಕ ಕಾಂಗ್ರೆಸ್​ನೊಳಗೂ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರಿದೆ. ಸಂಕ್ರಾಂತಿ ಕಳೆದು ಶಿವರಾತ್ರಿ ಬಂದರೂ ಕುರ್ಚಿ ಕಾಳಗ ಮುಂದುವರೆಯೋ ಎಲ್ಲ ಲಕ್ಷಣಗಳು ಗೋಚರಿಸ್ತಿವೆ. ಯಾಕಂದ್ರೆ ಅಸ್ಸಾಂ ಚುನಾವಣೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಿದೆ. ಹೌದು....ಕಳೆದ ಹಲವು ದಿನಗಳಿಂದ ರಾಹುಲ್ ಭೇಟಿಗೆ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದರು. ಆದ್ರೆ, ಅದು ಸಾಧ್ಯವಾಗದಕ್ಕೆ ದೆಹಲಿಯಿಂದ ಬರಿಗೈನಲ್ಲಿ ವಾಪಸ್ ಆಗುತ್ತಿದ್ದರು. ಆದ್ರೆ, ಇಂದು(ಜನವರಿ 16) ರಾಹುಲ್ ಗಾಂಧಿ ಭೇಟಿಗೆ ಸಮಯ ಕೂಡಿಬಂದಿದೆ. ಅಸ್ಸಾಂ ಚುನಾವಣೆ ಸಭೆ ಬಳಿಕ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದು, ಖುಷಿ ಖುಷಿಯಲ್ಲೇ ರಾಹುಲ್ ನಿವಾಸದಿಂದ ವಾಪಸ್ ಆಗಿದ್ದಾರೆ.

ನವದೆಹಲಿ, (ಜನವರಿ 16): ಸಂಕ್ರಾಂತಿಗೆ ಸೂರ್ಯ ಪಥ ಬದಲಾಗಿದೆ. ಹಾಗೆಯೇ ಕರ್ನಾಟಕ ಕಾಂಗ್ರೆಸ್​ನೊಳಗೂ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರಿದೆ. ಸಂಕ್ರಾಂತಿ ಕಳೆದು ಶಿವರಾತ್ರಿ ಬಂದರೂ ಕುರ್ಚಿ ಕಾಳಗ ಮುಂದುವರೆಯೋ ಎಲ್ಲ ಲಕ್ಷಣಗಳು ಗೋಚರಿಸ್ತಿವೆ. ಯಾಕಂದ್ರೆ ಅಸ್ಸಾಂ ಚುನಾವಣೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಿದೆ. ಹೌದು….ಕಳೆದ ಹಲವು ದಿನಗಳಿಂದ ರಾಹುಲ್ ಭೇಟಿಗೆ ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದರು. ಆದ್ರೆ, ಅದು ಸಾಧ್ಯವಾಗದಕ್ಕೆ ದೆಹಲಿಯಿಂದ ಬರಿಗೈನಲ್ಲಿ ವಾಪಸ್ ಆಗುತ್ತಿದ್ದರು. ಆದ್ರೆ, ಇಂದು(ಜನವರಿ 16) ರಾಹುಲ್ ಗಾಂಧಿ ಭೇಟಿಗೆ ಸಮಯ ಕೂಡಿಬಂದಿದೆ. ಅಸ್ಸಾಂ ಚುನಾವಣೆ ಸಭೆ ಬಳಿಕ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದು, ಖುಷಿ ಖುಷಿಯಲ್ಲೇ ರಾಹುಲ್ ನಿವಾಸದಿಂದ ವಾಪಸ್ ಆಗಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಸ್ಸಾಂ ಚುನಾವಣೆ ಸಂಬಂಧ ಗಂಟೆಗಟ್ಟಲೇ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದರು. ಇನ್ನು ಇದೇ ವೇಳೆ ರಾಹುಲ್ ಗಾಂಧಿ ಭೇಟಿ ‌ಮಾಡಿ ಚರ್ಚೆ ಮಾಡಿದ್ರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅದೆಲ್ಲಾ ಹೇಳಲು ಆಗಲ್ಲ, ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚಿಸಿದ್ದೇವೆ. ಬೇರೆ ಏನೂ ಮಾತನಾಡಲು ನಾನು ತಯಾರಿಲ್ಲ. ಮಲ್ಲಿಕಾರ್ಜುನ ಖರ್ಗೆ ನಮ್ಮ ಅಧ್ಯಕ್ಷರು ಭೇಟಿಯಾಗುವುದು ಸಹಜ. ಪ್ರತಿ ನಿತ್ಯವೂ ಒಳ್ಳೆಯದೇ ಎಂದಿ ಹೇಳುತ್ತಿದ್ದೇನೆ ಅಲ್ವಾ? ಎಂದು ಹೇಳಿದರು.

ಇದನ್ನೂ ನೋಡಿ: ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್