AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇಣುಗೋಪಾಲ್​​ ಕೈತಪ್ಪಿದ ಕೇರಳ ಸಿಎಂ ಪಟ್ಟ: ಹೈಕಮಾಂಡ್​​ನಿಂದ ಸಿಕ್ಕಿದ್ಯಾ ಬಿಗ್​ ಆಫರ್​?

ವೇಣುಗೋಪಾಲ್​​ ಕೈತಪ್ಪಿದ ಕೇರಳ ಸಿಎಂ ಪಟ್ಟ: ಹೈಕಮಾಂಡ್​​ನಿಂದ ಸಿಕ್ಕಿದ್ಯಾ ಬಿಗ್​ ಆಫರ್​?

ಕಿರಣ್​ ಹನಿಯಡ್ಕ
| Edited By: |

Updated on:May 14, 2026 | 1:47 PM

Share

ಕೇರಳ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದ ಕೆ.ಸಿ. ವೇಣುಗೋಪಾಲ್‌ಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಭರವಸೆ ನೀಡಲಾಗಿದ್ದು, ಇದರಿಂದ ಅವರು ಸಿಎಂ ಹುದ್ದೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಜನಭಿಪ್ರಾಯ ಮತ್ತು ಪಕ್ಷದ ಮುಖಂಡರ ಅಭಿಪ್ರಾಯವನ್ನು ಆಧರಿಸಿ ವಿ.ಡಿ. ಸತೀಶನ್ ಅವರನ್ನು ಕೇರಳ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಚುನಾವಣಾ ಫಲಿತಾಂಶ ಪ್ರಕಟಗೊಂಡು 10 ದಿನಗಳ ಬಳಿಕ ಹಲವು ಲೆಕ್ಕಾಚಾರ ಹಾಕಿ ಕಾಂಗ್ರೆಸ್​​ ನಾಯಕರು ನೂತನ ಸಿಎಂ ಹೆಸರು ಘೋಷಿಸಿದ್ದಾರೆ.

ತಿರುವನಂತಪುರಂ, ಮೇ 14: ಕೇರಳ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದ ಕೆ.ಸಿ. ವೇಣುಗೋಪಾಲ್‌ಗೆ ಒಂದು ವರ್ಷದ ಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಗಿದ ನಂತರ ವೇಣುಗೋಪಾಲ್‌ಗೆ ಈ ಪಟ್ಟ ನೀಡಲು ಚಿಂತನೆ ನಡೆಸಲಾಗುತ್ತಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ವೇಣುಗೋಪಾಲ್ ಕೇರಳ ಸಿಎಂ ಆಗುವುದರಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಖ್ಯಮಂತ್ರಿಯಾಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಸತೀಶನ್ ಪರವಾಗಿ ವ್ಯಕ್ತವಾದ ಸಾರ್ವಜನಿಕ ಬೆಂಬಲ, ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯಗಳು, ಕಾಂಗ್ರೆಸ್ ಮುಖಂಡರ ಸಲಹೆಗಳು ಹಾಗೂ ಮುಸ್ಲಿಂ ಲೀಗ್‌ನಿಂದಲೂ ಬಂದ ಬೆಂಬಲ ಈ ನಿರ್ಧಾರಕ್ಕೆ ಕಾರಣ ಎಂಬ ಮಾಹಿತಿ ಇದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 14, 2026 01:47 PM
Follow Us