ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್, ಪ್ರಿಯಾ ವಿವಾಹ ವಾರ್ಷಿಕೋತ್ಸವ

Updated on: Oct 19, 2025 | 9:34 AM

ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವನ್ನು ‘ಬಿಗ್ ಬಾಸ್ ಕನ್ನಡ’ ವೇದಿಕೆಯಲ್ಲಿ ಆಚರಿಸಲಾಗಿದೆ. ಸೀಸನ್ 12ರ ಮಿಡ್ ಸೀಸನ್ ಫಿನಾಲೆ ನಡೆದು, 2.0 ಲಾಂಚ್ ಆಗುತ್ತಿದೆ. ಪ್ರಿಯಾ ಸುದೀಪ್ ಕೂಡ ಈ ವೇದಿಕೆಗೆ ಬಂದಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಸಂಜೀವ್ ಅವರು ಮಾತನಾಡಿದ್ದಾರೆ.

ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ವಿಶೇಷ ಗೌರವ ಇದೆ. ಅವರ ವೈಯಕ್ತಿಕ ಬದುಕಿನ ಸುಖ-ದುಃಖಗಳನ್ನು ಈ ಕಾರ್ಯಕ್ರಮ ಹಂಚಿಕೊಂಡಿದೆ. ಈಗ ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವನ್ನು (Wedding Anniversary) ಇದೇ ವೇದಿಕೆಯಲ್ಲಿ ಆಚರಿಸಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮಿಡ್ ಸೀಸನ್ ಫಿನಾಲೆ ನಡೆದು, 2.0 ಲಾಂಚ್ ಆಗುತ್ತಿದೆ. ಈ ವೇದಿಕೆಗೆ ಪ್ರಿಯಾ ಸುದೀಪ್ (Priya Sudeep) ಕೂಡ ಬಂದಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಸಂಜೀವ್ ಅವರು ಮಾತನಾಡಿದ್ದಾರೆ. ಈ ಸಂಚಿಕೆಯ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್​ಸ್ಟಾರ್ ಮೂಲಕ ಅ.19ರ ರಾತ್ರಿ 8 ಗಂಟೆಗೆ ಈ ಎಪಿಸೋಡ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More