AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಪರ ನಿಂತ ಗಿಲ್ಲಿಗೆ ಕಿಚ್ಚನ ಚಪ್ಪಾಳೆ; ಇದು ನನ್ನದು ಮಾತ್ರವಲ್ಲ, ಕರ್ನಾಟಕದ ಚಪ್ಪಾಳೆ ಎಂದ ಸುದೀಪ್

ಕಿಚ್ಚ ಸುದೀಪ್ ಅವರು ಪ್ರತಿ ವಾರ ಚಪ್ಪಾಳೆ ಕೊಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಆದರೆ, ಇದಕ್ಕೆ ಸಾಕಷ್ಟು ಶ್ರಮ ಹಾಕಲೇಬೇಕು. ಆದರೆ, ಇದು ಅಷ್ಟು ಸುಲಭವಾಗಿ ಸಿಗೋದೆ ಇಲ್ಲ. ಈಗ ಗಿಲ್ಲಿ ಅವರು ಈ ಚಪ್ಪಾಳೆ ಪಡೆದರು. ಇದಕ್ಕೆ ಕಾರಣವನ್ನು ಸುದೀಪ್ ಅವರು ವಿವರಿಸಿದರು.

ರಕ್ಷಿತಾ ಪರ ನಿಂತ ಗಿಲ್ಲಿಗೆ ಕಿಚ್ಚನ ಚಪ್ಪಾಳೆ; ಇದು ನನ್ನದು ಮಾತ್ರವಲ್ಲ, ಕರ್ನಾಟಕದ ಚಪ್ಪಾಳೆ ಎಂದ ಸುದೀಪ್
Gilli
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Oct 18, 2025 | 11:08 PM

Share

ಕಿಚ್ಚ ಸುದೀಪ್ ಅವರು ಪ್ರತಿ ವಾರ ಒಬ್ಬ ಸ್ಪರ್ಧಿಗೆ ಚಪ್ಪಾಳೆ ಕೊಡುತ್ತಾರೆ. ಇಡೀ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುವವರಿಗೆ ಸುದೀಪ್ ಈ ಚಪ್ಪಾಳೆ ನೀಡುತ್ತಾರೆ. ಇಡೀ ವಾರವನ್ನು ಗಮನಿಸಿ ಅವರು ಇದನ್ನು ನೀಡುತ್ತಾರೆ. ಈ ಬಾರಿ ಕಿಚ್ಚ ಸುದೀಪ್ ಅವರು ಈ ಚಪ್ಪಾಳೆಯನ್ನು ಗಿಲ್ಲಿ ನಟನಿಗೆ ನೀಡಿದರು. ಇದಕ್ಕೆ ಕಾರಣವೂ ಇದೆ. ಅವರು ರಕ್ಷಿತಾ ಪರ ನಿಂತರು. ಇದಕ್ಕಾಗಿ ಈ ಚಪ್ಪಾಳೆ ಸಿಕ್ಕಿದೆ ಎನ್ನಬಹುದು.

ಕಿಚ್ಚ ಸುದೀಪ್ ಅವರು ಪ್ರತಿ ವಾರ ಚಪ್ಪಾಳೆ ಕೊಡುತ್ತಾರೆ. ಈ ಚಪ್ಪಾಳೆ ತೆಗೆದುಕೊಳ್ಳಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಆದರೆ, ಇದಕ್ಕೆ ಸಾಕಷ್ಟು ಶ್ರಮ ಹಾಕಲೇಬೇಕು. ಆದರೆ, ಇದು ಅಷ್ಟು ಸುಲಭವಾಗಿ ಸಿಗೋದೆ ಇಲ್ಲ. ಈಗ ಗಿಲ್ಲಿ ಅವರು ಈ ಚಪ್ಪಾಳೆ ಪಡೆದರು. ಇದಕ್ಕೆ ಕಾರಣವನ್ನು ಸುದೀಪ್ ಅವರು ವಿವರಿಸಿದರು.

ಈ ಬಾರಿ ರಕ್ಷಿತಾ ಶೆಟ್ಟಿ ಅವರಿಗೆ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಸಾಕಷ್ಟು ರ್ಯಾಗ್ ಮಾಡಿದರು. ಈ ರೀತಿ ರ್ಯಾಗ್ ಮಾಡೋದು ಸರಿ ಅಲ್ಲ ಎಂದು ಯಾರೊಬ್ಬರೂ ಮುಂದೆ ಬಂದು ಹೇಳಲೇ ಇಲ್ಲ. ಆದರೆ ಗಿಲ್ಲಿ ಹಾಗಿಲ್ಲ. ಪ್ರತಿ ಹಂತದಲ್ಲೂ ರಕ್ಷಿತಾ ಅವರನ್ನು ಬೆಂಬಲಿಸುತ್ತಾ ಬಂದರು. ಅವರು ಪ್ರತಿ ಹಂತದಲ್ಲೂ ರಕ್ಷಿತಾನ ಸಪೋರ್ಟ್ ಮಾಡಿದರು. ಈ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಇದನ್ನೂ ಓದಿ: ಸುದೀಪ್ ಅವಾಜ್​ಗೆ ಅಶ್ವಿನಿ ಗೆಜ್ಜೆ ಸದ್ದು ಸೈಲೆಂಟ್; ಇಷ್ಟೆಲ್ಲ ಆದ್ರೂ ಪಶ್ಚಾತಾಪ ಮಾತ್ರ ಇಲ್ಲ

‘ಸರಿಯಾದ ಸಮಯದಲ್ಲಿ ಸ್ಟ್ಯಾಂಡ್ ತಗೊಳೋದು ಮುಖ್ಯ. ನೀವು ತೆಗೆದುಕೊಳ್ಳುವ ಸ್ಟ್ತಾಂಡ್​ಗೆ ಇಡೀ ಕರ್ನಾಟಕ ಚಪ್ಪಾಳೆ ತಟ್ಟುತ್ತೆ. ಹಾಗೆ ತೆಗೆದುಕೊಳ್ಳುವ ಸ್ಟ್ಯಾಂಡ್ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.