ರಾಜಕೀಯದ ಎಂಟ್ರಿ ಪ್ಲ್ಯಾನ್ ಬಗ್ಗೆ ಮೌನ ಮುರಿದ ನಟ ಕಿಚ್ಚ ಸುದೀಪ್

Updated on: Sep 01, 2025 | 3:23 PM

‘ಸದ್ಯಕ್ಕೆ ಕಲಾವಿದನಾಗಿ ಇಷ್ಟು ಮಾಡಬಲ್ಲೆ. ರಾಜಕೀಯಕ್ಕೆ ಎಂಟ್ರಿ ಆದಾಗ ಬೇರೆ ಎಲ್ಲವನ್ನೂ ಮಾಡೋಣ’ ಎಂದು ಸುದೀಪ್ ಹೇಳಿದರು. ಹಾಗಾದ್ರೆ ರಾಜಕೀಯಕ್ಕೆ ಬರುವುದು ಯಾವಾಗ ಎಂದು ಕೇಳಿದ್ದಕ್ಕೆ, ‘ಗೊತ್ತಿಲ್ಲ, ಸದ್ಯಕ್ಕೆ ಯೋಚನೆ ಇಲ್ಲ. ಆದರೆ ಆಗಾಗ ಆ ಯೋಚನೆ ಬರುವ ಹಾಗೆ ಮಾಡುತ್ತಿರುತ್ತಾರೆ ಕೆಲವರು’ ಎಂದಿದ್ದಾರೆ ಸುದೀಪ್.

ನಟ ಕಿಚ್ಚ ಸುದೀಪ್ (Kichcha Sudeep) ಅವರು ಯಾವಾಗ ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಈ ಬಗ್ಗೆ ಅವರು ಉತ್ತರ ನೀಡಿದ್ದಾರೆ. ಹುಟ್ಟುಹಬ್ಬದ (Sudeep Birthday) ಪ್ರಯುಕ್ತ ಸುದೀಪ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ರಾಜಕೀಯದ ಬಗ್ಗೆ ಅವರು ಮಾತನಾಡಿದರು. ‘ಅಮ್ಮನ ಹೆಜ್ಜೆ ಹಸಿರು ಹೆಜ್ಜೆ’ ಎಂದು ಸುದೀಪ್ ಅವರು ಪರಿಸರ ಉಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ‘ಕಲಾವಿದನಾಗಿ ಸದ್ಯಕ್ಕೆ ಇಷ್ಟು ಮಾಡಬಲ್ಲೆ. ರಾಜಕೀಯಕ್ಕೆ ಎಂಟ್ರಿ ಆದಾಗ ಬೇರೆ ಎಲ್ಲ ಮಾಡೋಣ’ ಎಂದು ಸುದೀಪ್ ಹೇಳಿದರು. ಹಾಗಾದರೆ ರಾಜಕೀಯಕ್ಕೆ ಬರೋದು ಯಾವಾಗ ಎಂದು ಕೇಳಿದ್ದಕ್ಕೆ, ‘ಗೊತ್ತಿಲ್ಲ.. ಸದ್ಯಕ್ಕೆ ಆ ಯೋಚನೆ ಇಲ್ಲ. ಆದರೆ ಆಗಾಗ ಯೋಚನೆ ಬರುವ ಹಾಗೆ ಮಾಡುತ್ತಿರುತ್ತಾರೆ ಕೆಲವರು’ ಎಂದಿದ್ದಾರೆ ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.