ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Edited By:

Updated on: Jan 12, 2026 | 6:50 PM

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಚರ್ಚೆಗಳಿರುವಾಗ, ಕೋಡಿ ಮಠದ ಶ್ರೀಗಳು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯುಗಾದಿ ಮುಗಿಯುವವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಡಿ.ಕೆ. ಶಿವಕುಮಾರ್‌ಗೆ ಅಧಿಕಾರ ಸಿಗುವ ಸಾಧ್ಯತೆ ಕುರಿತು ಯುಗಾದಿ ಬಳಿಕ ಸ್ಪಷ್ಟ ಭವಿಷ್ಯ ನುಡಿಯುವುದಾಗಿ ತಿಳಿಸಿದ್ದಾರೆ.

ರಾಯಚೂರು, ಜನವರಿ 12: ಸಂಕ್ರಾಂತಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಸಂಬಂಧ ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ, ಯುಗಾದಿ ಅಲ್ಲ, ಬಜೆಟ್‌ವರೆಗೂ ಏನೂ ಮಾಡಲಾಗಲ್ಲ ಎಂದು ಕಾಗಿನೆಲೆ ಕನಕಪೀಠದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಜ್ಯೋತಿಷ್ಯದಲ್ಲಿ ನಂಬುವ ಜನ ಸಂಕ್ರಾಂತಿ, ಯುಗಾದಿ ಅಂತಾ ಹೇಳ್ತಾರೆ. ಸಂಕ್ರಾಂತಿಯಲ್ಲಿ ಸೂರ್ಯ, ಯುಗಾದಿಯಲ್ಲಿ ಚಂದ್ರನನ್ನು ಹಿಡಿದು ಜ್ಯೋತಿಷ್ಯ ಹೇಳುತ್ತಾರೆ. ಯುಗಾದಿ ಹಬ್ಬ ಮುಗಿಯುವವರೆಗೂ ಸಿದ್ದರಾಮಯ್ಯ ಇರಲಿದ್ದು, ಮುಂದಿನದು ಯುಗಾದಿ ನೋಡಿಕೊಂಡು ಹೇಳಬೇಕು ಎಂದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಡದಲ್ಲಿರುವ ವಿಚಾರವಾಗಿಯೂ ಮಾತನಾಡಿದ ಅವರು, ಆತ ಒಳ್ಳೆಯ ಕಾರ್ಯಕರ್ತ, ಸಂಘಟನೆ ಮನುಷ್ಯ, ಹೋರಾಟಗಾರ. ಆದ್ರೆ ಇಲ್ಲಿ ಸಂಘಟನೆ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡ್ತಾರಾ? ಇಲ್ಲವಾ? ಅನ್ನೋದನ್ನ ನೋಡಿ ಹೇಳ್ತೇನೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರಶ್ರೀ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.