ತುಂಗಭದ್ರಾ ನದಿಯಲ್ಲಿ ನೀರುಪಾಲು, ಕೊನೇ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದ ವೈದ್ಯೆ, ವಿಡಿಯೋ ಇಲ್ಲಿದೆ

Edited By:

Updated on: Feb 20, 2025 | 11:55 AM

ತುಂಗಭದ್ರಾ ನದಿಗೆ 20 ಅಡಿ ಎತ್ತರದಿಂದ ಧುಮುಕಿ ಹೈದರಾಬಾದ್​ನ ವೈದ್ಯೆ ಅನನ್ಯರಾವ್ ಮೃತಪಟ್ಟ ಹೃದಯ ವಿದ್ರಾವಕ ಘಟನೆಯ ಒಂದೊಂದೇ ವಿಡಿಯೋಗಳು ಈಗ ಬಹಿರಂಗವಾಗುತ್ತಿದೆ. ಕೊನೇ ಕ್ಷಣದಲ್ಲಿ ನದಿ ನೀರಿನಲ್ಲಿ ಆಕೆ ಜೀವ ಉಳಿಸಲು ವಿಲವಿಲ ಒದ್ದಾಡಿದ್ದ ವಿಡಿಯೋ ಆಕೆಯ ಸ್ನೇಹಿತೆಯ ಮೊಬೈಲ್​ನಲ್ಲಿ ರೆಕಾರ್ಡ್ ಆಗಿದೆ.

ಕೊಪ್ಪಳ, ಫೆಬ್ರವರಿ 20: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ತುಂಗಭದ್ರಾ ನದಿಯ ನೀರು ಪಾಲಗಿರುವ ವೈದ್ಯೆ ಅನನ್ಯರಾವ್ ಕೊನೇ ಕ್ಷಣದ ವಿಡಿಯೋ ‘ಟಿವಿ9’ಗೆ ಲಭ್ಯವಾಗಿದೆ. ಹಲವು ಬಾರಿ ಯೋಚನೆ ಮಾಡಿ ನಂತರ 20 ಅಡಿ ಎತ್ತರದಿಂದ ನದಿಗೆ ಧುಮುಕಿದ್ದ ಅನನ್ಯರಾವ್ ಕೊನೆ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದರು. ಈ ದೃಶ್ಯ ನದಿಯ ಹಿಂಬದಿಯ ಇನ್ನೊಂದು ಸ್ಥಳದಲ್ಲಿದ್ದ ಸ್ನೇಹಿತೆಯ ಮೊಬೈಲ್​​ನಲ್ಲಿ ರೆಕಾರ್ಡ್ ಆಗಿತ್ತು. ವಿಡಿಯೋ ಇಲ್ಲಿದೆ.

ಈಜಲು ಹೋಗಿದ್ದ ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!