ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು ಸಂತಸ ತಂದಿದೆ: ಸಂತೋಷ್ ಲಾಡ್
ಮುಡಾದಿಂದ ಒಟ್ಟು 125 ಸೈಟುಗಳನ್ನು ಅಕ್ರಮವಾಗಿ ಅಲಾಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು, ಅದರೆ ರಾಜ್ಯಪಾಲರು ಮುಖ್ಯಮಂತ್ರಿಯವರ ಪತ್ನಿಗೆ ಅಲಾಟಾಗಿದ್ದ 14 ಸೈಟುಗಳಿಗೆ ಮಾತ್ರ ತನಿಖೆಗೆ ಆದೇಶ ನೀಡಿದರು? ಉಳಿದ 111 ಸೈಟುಗಳನ್ನು ಪಡೆದವರು ಯಾರು? ಆ ಸೈಟುಗಳನ್ನು ಹೇಗೆ ಪಡೆದಿದ್ದು, ಯಾವ ಆಧಾರದ ಮೇಲೆ ಅವರಿಗೆ ಅಲಾಟ್ ಮಾಡಲಾಗಿತ್ತು ಅಂತ ಯಾರೂ ಪ್ರಶ್ನಿಸಲಿಲ್ಲ ಎಂದು ಲಾಡ್ ಹೇಳಿದರು.
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬದುಕಲ್ಲಿ ಬಿಜೆಪಿ ನಾಯಕರು ಒಂದು ಕಪ್ಪು ಚುಕ್ಕೆ ಇಡುವ ಪ್ರಯತ್ನವನ್ನು ಮಾಡಿದ್ದರು, ಅದರೆ ಅವರಿಗೆ ಮತ್ತು ಅವರ ಧರ್ಮಪತ್ನಿಯವರಿಗೆ ಮುಡಾ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಸಿದ್ದರಾಮಯ್ಯ ಪತ್ನಿ ಅವರಿಗೆ ವಿಐಪಿ ಕೋಟಾದಲ್ಲಾಗಲೀ ಅಥವಾ ಬೇರೆ ಯಾವುದೋ ಕೋಟಾದಲ್ಲಿ ಸೈಟು ಸಿಕ್ಕಿರಲಿಲ್ಲ, ಮುಡಾ ಅವರ ಜಮೀನನ್ನು ಸ್ವಾಧೀನ ಮಾಡಿಕೊಂಡಿತ್ತು ಅದಕ್ಕೆ ಬದಲೀ ಸೈಟುಗಳನ್ನು ಅವರಿಗೆ ನೀಡಲಾಗಿತ್ತು, ಅದರೆ ಬಿಜೆಪಿಯವರಿಗೆ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡೋದು ಬೇಕಿತ್ತು ಎಂದು ಸಂತೋಷ್ ಲಾಡ್ ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕು ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ ಇದೆ: ಸ್ನೇಹಮಯಿ ಕೃಷ್ಣ

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೋದಿ ಭೇಟಿ

ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ

ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
