ಇಬ್ಬರು ಶಾಸಕರು ಮತ್ತವರ ಗನ್ ಮ್ಯಾನ್​ಗಳನ್ನು ಶಿವಕುಮಾರ್ ವೇದಿಕೆಯ ಮೇಲಿಂದ ಕೆಳಗಿಳಿಸಿದ್ದು ಯಾಕೆ ಗೊತ್ತಾ?

|

Updated on: Mar 17, 2025 | 6:11 PM

ವೇದಿಕೆಯ ಪಾವಿತ್ರ್ಯತೆ ಮತ್ತು ಶಿಸ್ತನ್ನು ಶಾಸಕರಾದ ನೀವು ಮೊದಲು ಕಾಪಾಡಬೇಕು, ಪಕ್ಷದ ರಾಜ್ಯಾಧ್ಯಕ್ಷ ವೇದಿಕೆ ಮೇಲೆ ನಿಂತು ಮಾತಾಡುವಾಗ ಅದರ ಗಾಭೀರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಸಾದ್ ಕಡೆ ನೋಡುತ್ತ ಶಿವಕುಮಾರ್ ಹೇಳುತ್ತಾರೆ. ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದು.

ಬೆಂಗಳೂರು, 17 ಮಾರ್ಚ್: ವೇದಿಕೆ ಮೇಲೆ ನಿಂತು ಪಕ್ಷದ ಯುವ ಪದಾಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಹಿಂಬದಿಯಲ್ಲೇ ಶಿಸ್ತಿನ ಉಲ್ಲಂಘನೆಯಾಗುತ್ತಿದ್ದಿದ್ದು ಕಂಡು ಕೋಪವುಕ್ಕಿತು. ಅವರು ಭಾಷಣ ಮಾಡುತ್ತಿದ್ದಾಗ ಕಾಂಗ್ರೆಸ್ ಶಾಸಕರಾದ ಎನ್ ಹೆಚ್ ಕೋನರೆಡ್ಡಿ (NH Konareddy) ಮತ್ತು ಪ್ರಸಾದ್ ಅಬ್ಬಯ್ಯ ಯುವ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲು ವೇದಿಕೆ ಮೇಲೆ ಗನ್​ ಮ್ಯಾನ್​ಗಳೊಂದಿಗೆ ಬಂದಾಗ ಶಿವಕುಮಾರ್ ಪಿತ್ತ ನೆತ್ತಿಗೇರುತ್ತದೆ. ಕೋನರೆಡ್ಡಿ ಸೇರಿದಂತೆ ಎಲ್ಲರನ್ನೂ ಅವರು ವೇದಿಕೆ ಮೇಲಿಂದ ಕೆಳಗಿಳಿಸುತ್ತಾರೆ. ಎಲ್ಲರೂ ಪೆಚ್ಚುಮೋರೆ ಹಾಕ್ಕೊಂಡು ಕೆಳಗಿಳಿಯುತ್ತಾರಾದರೂ ಪ್ರಸಾದ್ ಪುನಃ ವೇದಿಕೆ ಬರುತ್ತಾರೆ, ಈ ಬಾರಿ ಬರಿಗೈಲಿ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಕ್ಷದ ಸಂಘಟನೆ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Published on: Mar 17, 2025 06:09 PM