AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗೇಂದ್ರ ಆಯ್ತು, ಕೆಪಿಎಸ್​​ಸಿ ಹಗರಣದಲ್ಲಿ ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್

ನಾಗೇಂದ್ರ ಆಯ್ತು, ಕೆಪಿಎಸ್​​ಸಿ ಹಗರಣದಲ್ಲಿ ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್

ಕಿರಣ್​ ಹನಿಯಡ್ಕ
| Edited By: |

Updated on: Sep 01, 2026 | 12:49 PM

Share

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಎಸ್ಸಿ ಹಗರಣ, ಬರಗಾಲ ನಿರ್ವಹಣೆ, ಗೃಹಲಕ್ಷ್ಮಿ ಯೋಜನೆಯಲ್ಲಿನ ವಿಳಂಬ ಮತ್ತು ನಾಗೇಂದ್ರ ರಾಜೀನಾಮೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ. ಮುಖ್ಯಮಂತ್ರಿಗಳ ಗದಗ ಭೇಟಿಯನ್ನು ನಾಟಕ ಎಂದು ಅಶೋಕ್ ಟೀಕಿಸಿದ್ದಾರೆ.

ರಾಯಚೂರು, ಸೆಪ್ಟೆಂಬರ್ 1: ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಿಂಗಸಗೂರು ಟು ಬಳ್ಳಾರಿ ಪಾದಯಾತ್ರೆ ಆರಂಭಿಸುವ ಮುನ್ನ ಮಾತನಾಡಿದ ಅವರು, ನಾಗೇಂದ್ರ ಅವರ ರಾಜೀನಾಮೆ ಪ್ರತಿಪಕ್ಷಗಳ ಹೋರಾಟದ ಫಲ ಎಂದು ಹೇಳಿದರು. ಕೆಪಿಎಸ್ಸಿ ಹಗರಣದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಮತ್ತು ಮಂತ್ರಿಗಳು ಶಾಮೀಲಾಗಿದ್ದು, ಶಾರ್ಕ್ ಮೀನುಗಳು ಹಾಗೂ ತಿಮಿಂಗಲಗಳು ಹೊರಬರಬೇಕು ಎಂದು ಒತ್ತಾಯಿಸಿದರು. ನಾಗೇಂದ್ರ ವಿಕೆಟ್ ಪತನದ ಬೆನ್ನಲ್ಲೇ ಕೆಪಿಎಸ್ಸಿ ಹಗರಣದಲ್ಲಿ ಮತ್ತೊಂದು ವಿಕೆಟ್ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 175 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಿದ್ದರೂ, ಕೇವಲ 101 ತಾಲೂಕುಗಳನ್ನು ಮಾತ್ರ ಘೋಷಿಸಲಾಗಿದೆ. ಇದು ಸರ್ಕಾರದ ಹಣಕಾಸಿನ ಕೊರತೆಯನ್ನು ತೋರಿಸುತ್ತದೆ ಎಂದು ಅಶೋಕ್ ಆರೋಪಿಸಿದರು. ರೇಷನ್ ಕಾರ್ಡ್, ಗೃಹಲಕ್ಷ್ಮಿ ಯೋಜನೆಯ ಹಣ ನೀಡದಿರುವುದು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದರು. ಮುಖ್ಯಮಂತ್ರಿಗಳ ಗದಗ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹೋರಾಟ ಆರಂಭಿಸಿದ ನಂತರ ಮುಖ್ಯಮಂತ್ರಿಗಳು ಬರ ಅಧ್ಯಯನಕ್ಕೆ ಹೋಗುತ್ತಿರುವುದು ನಾಟಕ ಎಂದರು. ಅಶೋಕ್ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಪಾದಯಾತ್ರೆಯಲ್ಲಿ ಒಂದು ದಿನ ಮಾತ್ರ ಭಾಗಿಯಾಗಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us