‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಇದಕ್ಕೆ ಕಾರಣ ಸಿನಿಮಾದ ಥೀಮ್ ಹಾಗೂ ಟೈಟಲ್. ಈ ಸಿನಿಮಾದಲ್ಲಿ ದೈವದ ಕಥೆ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಚಿತ್ರತಂಡ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ. ಈ ಸಿನಿಮಾದಲ್ಲಿ ಸ್ವಲ್ಪ ಭಾಗ ಮಾತ್ರ ದೈವದ ಕಥೆ ಇದೆ ಎಂದು ವಿವರಣೆ ನೀಡಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
‘ಕ್ಷೇತ್ರಪಾಲ’ ಸಿನಿಮಾ ತನ್ನ ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ. ಈ ಚಿತ್ರದ ಟೈಟಲ್ ಕೇಳಿದರೆ ಅದು ದೈವದ ಕಥೆ ಇರುವ ಚಿತ್ರವೇ ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಸಿಕ್ಕಿದೆ. ‘ಕ್ಷೇತ್ರಪಾಲ ಎಂದರೆ ದೇವಸ್ಥಾನ ಕಾಯುವವನು. ಅದೇ ರೀತಿ ಊರನ್ನು ಕಾಯುವವನು ಕ್ಷೇತ್ರಪಾಲನೇ. ಇದು ದೇವರ ಅಥವಾ ದೈವದ ಸಿನಿಮಾ ಅಲ್ಲ. ಆದರೆ, ದೇವರ ಮೇಲೆ ನಂಬಿಕೆ ಇಟ್ಟವರ ಕುರಿತ ಸಿನಿಮಾ’ ಎಂದು ತಂಡ ವಿವರಿಸಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 09, 2026 08:37 AM
Follow Us

