Loading video

ಮುಸಲ್ಮಾನರ ವೋಟು ಕೇಳುವ ಹಕ್ಕನ್ನು ಕುಮಾರಸ್ವಾಮಿ ಕಳೆದುಕೊಂಡಿದ್ದಾರೆ: ಡಿಕೆ ಶಿವಕುಮಾರ್

|

Updated on: Nov 25, 2024 | 2:10 PM

ಯಾರೇ ಇರಲಿ ಯಾರೇ ಹೋಗಲಿ, ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆ ಇಲ್ಲ, ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ, ಚಕ್ರವರ್ತಿಗಳೆನಿಸಿಕೊಳ್ಳಲು ಹವಣಿಸುತ್ತಿದ್ದ ಸದ್ದಾಂ ಹುಸ್ಸೇನ್ ಅಂಥವರೇ ಅಳಿದು ಹೋಗಿದ್ದಾರೆ ಎಂದು ಹೇಳಿದ ಶಿವಕುಮಾರ್, ನಿಖಿಲ್ ಕುಮಾರಸ್ವಾಮಿ ಬಗ್ಗೆ ತನಗೆ ಸಹಾನುಭೂತಿ ಎಂದರು.

ಬೆಂಗಳೂರು: ಚನ್ನಪಟ್ಟಣದಲ್ಲಿ ಮುಸ್ಲಿಂ ವೋಟು ಕೈಬಿಟ್ಟಿದ್ದಕ್ಕೆ ಸೋಲುಣ್ಣಬೇಕಾಯಿತು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಯಾವ ನೈತಿಕತೆಯೊಂದಿಗೆ ಅವರ ಮತ ಕೇಳುತ್ತಾರೆ? ಎನ್ ಡಿಎ ಮುಸಲ್ಮಾನರಿಗಾಗಿ ಏನಾದರೂ ಮಾಡಿದೆಯಾ, ಯಾವುದಾದರೂ ಕಾರ್ಯಕ್ರಮ ರೂಪಿಸಿದೆಯಾ? ಅವರಿಗಿದ್ದ 4 ಪರ್ಸೆಂಟ್ ಮೀಸಲಾತಿಯನ್ನು ಸಹ ಕಸಿದು ಬೇರೆಯವರಿಗೆ ನೀಡಲಾಗಿದೆ, ಮತ್ಯಾಕೆ ಅವರು ಜೆಡಿಎಸ್ ಗೆ ವೋಟು ಹಾಕುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್​ ಗೆಲುವಿಗೆ ಜೆಡಿಎಸ್-ಬಿಜೆಪಿ ಬೆಂಬಲಿಸಿವೆ: ಡಿಕೆ ಶಿವಕುಮಾರ್ ಶಾಕಿಂಗ್​ ಹೇಳಿಕೆ

Published on: Nov 25, 2024 01:53 PM