ಜನರ ಗಮನ ಡೈವರ್ಟ್ ಮಾಡಲು ಕುಮಾರಸ್ವಾಮಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ: ಕೆಎಂ ಶಿವಲಿಂಗೇಗೌಡ
ಈ ಪೆನ್ ಡ್ರೈವ್ ಗಳಲ್ಲಿ ಎರಡು ಪ್ರಮುಖ ಅಂಶಗಳೆಂದರೆ ವ್ಯಭಿಚಾರ ಮತ್ತು ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದವನೇ ತನ್ನ ವ್ಯಭಿಚಾರವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ, ಅದನ್ನು ಗೊತ್ತು ಮಾಡಿಕೊಂಡ ಡ್ರೈವರ್ ಪೆನ್ ಡ್ರೈವ್ ಗಳಲ್ಲಿ ತುಂಬಿಕೊಂಡು ದೇವರಾಜೇಗೌಡನಿಗೆ ಕೊಟ್ಟಿದ್ದಾನೆ. ಈ ದೇವರಾಜೇಗೌಡ ಅದನ್ನು ಪಬ್ಲಿಕ್ ಮಾಡಿದ್ದಾನೆ. ಇದರಲ್ಲಿ ಶಿವಕುಮಾರ್ ಪಾತ್ರ ಎಲ್ಲಿಂದ ಬಂತು? ಎಂದು ಗೌಡರು ಪ್ರಶ್ನಿಸಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda), ಡಿಕೆ ಶಿವಕುಮಾರ್ ರನ್ನು ಸಿಡಿ ಶಿವು ಎಂದು ಉಲ್ಲೇಖಿಸಿದ ಹೆಚ್ ಡಿ ಕುಮಾಸ್ವಾಮಿಯವರನ್ನು (HD Kumaraswamy) ತಮ್ಮ ಎಂದಿನ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡರು. ಕುಮಾರಸ್ವಾಮಿಯನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇವೆ, ಅವರು ಯಾವತ್ತಿಗೂ ಹಿಟ್ ಅಂಡ್ ರನ್ ಪಾರ್ಟಿ, ಆಧಾರರಹಿತ ಅರೋಪಗಳನ್ನು ಮಾಡುತ್ತಿರುತ್ತಾರೆ ಎಂದು ಹೇಳಿದ ಗೌಡರು ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಗಳು ಸಾರ್ವಜನಿಕವಾಗಿ ಲೀಕ್ ಆಗೋದಿಕ್ಕೆ ಶಿವಕುಮಾರ್ (DK Shivakumar) ಹೇಗೆ ಕಾರಣರಾಗುತ್ತಾರೆ? ಅವರು ಭಾಗಿಯಾಗಿದ್ದಾರೆ ಅನ್ನೋದಿಕ್ಕೆ ಸಾಕ್ಷ್ಯಾಧಾರಗಳಿದ್ದರೆ ಎಸ್ಐಟಿ ಮುಂದೆ ಹೇಳಲಿ, ಅವರು ಖಂಡಿವಾಗಿ ತನಿಖೆ ಮಾಡುತ್ತಾರೆ ಎಂದರು. ಈ ಪೆನ್ ಡ್ರೈವ್ ಗಳಲ್ಲಿ ಎರಡು ಪ್ರಮುಖ ಅಂಶಗಳೆಂದರೆ ವ್ಯಭಿಚಾರ ಮತ್ತು ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದವನೇ ತನ್ನ ವ್ಯಭಿಚಾರವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ, ಅದನ್ನು ಗೊತ್ತು ಮಾಡಿಕೊಂಡ ಡ್ರೈವರ್ ಪೆನ್ ಡ್ರೈವ್ ಗಳಲ್ಲಿ ತುಂಬಿಕೊಂಡು ದೇವರಾಜೇಗೌಡನಿಗೆ ಕೊಟ್ಟಿದ್ದಾನೆ. ಈ ದೇವರಾಜೇಗೌಡ ಅದನ್ನು ಪಬ್ಲಿಕ್ ಮಾಡಿದ್ದಾನೆ. ಇದರಲ್ಲಿ ಶಿವಕುಮಾರ್ ಪಾತ್ರ ಎಲ್ಲಿಂದ ಬಂತು? ಜನರ ಗಮನ ಡೈವರ್ಟ್ ಮಾಡಲು ಕುಮಾರಸ್ವಾಮಿ ಇಲ್ಲಸಲ್ಲದನ್ನು ಮಾತಾಡುತ್ತಿದ್ದಾರೆ, ಅವರಲ್ಲಿ ಸಾಕ್ಷಿಗಳಿದ್ದರೆ ದೂರು ಸಲ್ಲಿಸಲಿ ಯಾರು ಬೇಡಂತಾರೆ ಎಂದು ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ