AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!

ಧಾರವಾಡ: ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Jan 23, 2026 | 1:57 PM

Share

ಧಾರವಾಡದ ಚಂದ್ರಕಾಂತ ಬೆಲ್ಲದ್ ನಗರದಲ್ಲಿ ಫಲಾನುಭವಿಗಳಿಗೆ ಜಿ ಪ್ಲಸ್​​ ಮಾದರಿಯ ಮನೆಗಳನ್ನು ನೀಡಿರುವ ಸರ್ಕಾರ, ಬಡಾವಣೆಗೆ ಮೂಲ ಸೌಯರ್ಕ ಒದಗಿಸದೇ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಇಲ್ಲಿ ಬಂದು ನೆಲೆಸಲು ಜನ ಹಿಂದೇಟು ಹಾಕುತ್ತಿದ್ದು, ಬಹುತೇಕ ಮನೆಗಳು ಖಾಲಿ ಬಿದ್ದಿವೆ. ಚರಂಡಿ ನಿರ್ಮಿಸದೇ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಕುಡಿಯೋ ನೀರಿನ ಸಮಸ್ಯೆಯೂ ಇಲ್ಲಿದೆ ಎನ್ನಲಾಗಿದೆ.

ಧಾರವಾಡ, ಜನವರಿ 23: ಸಿಎಂ ನೆತೃತ್ವದಲ್ಲಿ ನಾಳೆ ಹುಬ್ಬಳ್ಳಿಯಲ್ಲಿ ರಾಜ್ಯದ 42 ಸಾವಿರ ಬಡ ಜನರಿಗೆ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ಇದರ ಬೆನ್ನಲ್ಲೇ ಧಾರವಾಡದಲ್ಲಿ ಹೊಸ ಚರ್ಚೆ ಶುರುವಾಗಿದ್ದು, ಚಂದ್ರಕಾಂತ ಬೆಲ್ಲದ್ ನಗರದಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಿಸಿಕೊಡಲಾಗಿರುವ ಜಿ ಪ್ಲಸ್​​ ಮಾದರಿಯ ಸುಮಾರು 1,179 ಮನೆಗಳಿಗೆ ಸರ್ಕಾರ ಮೂಲ ಸೌಕರ್ಯ ಒದಗಿಸಿ ಕೊಡೋದು ಯಾವಾಗ ಎಂಬ ಪ್ರಶ್ನೆ ಎದ್ದಿದೆ. ಅರವಿಂದ ಬೆಲ್ಲದ್ ಕ್ಷೇತ್ರದಲ್ಲಿ ಸ್ಲಮ್ ಬೋರ್ಡ್‌ನಿಂದ ಮನೆಗಳು ನಿರ್ಮಾಣಗೊಂಡಿದ್ದರೂ ಬಡಾವಣೆಗೆ ಈ ವರೆಗೂ ಅಗತ್ಯ ಸೌಲಭ್ಯಗಳು ಸಿಕ್ಕಿಲ್ಲ. ಚರಂಡಿ ನಿರ್ಮಿಸದೇ ಹಕ್ಕುಪತ್ರ ವಿತರಣೆ ಮಾಡಲಾಗಿದ್ದು, ಕುಡಿಯೋ ನೀರಿನ ಸಮಸ್ಯೆಯೂ ಇದೆ. ಹೀಗಾಗಿ ಈ ಮನೆಗಳಿಗೆ ಬಂದು ನೆಲೆಸಲು ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದು, ಬಹುಥೇಕ ಮನೆಗಳು ಖಾಲಿ ಬಿದ್ದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.