ರಾಮನಗರದ ಎಲ್ಲ ಶಾಸಕರಂತೆ ನಾನೂ ಸಹ ಶಿವಕುಮಾರ್ ಸಿಎಂ ಆಗುವುದನ್ನು ಬಯಸುತ್ತೇನೆ: ಯೋಗೇಶ್ವರ್
ಶಿವಕುಮಾರ್ ಆಪ್ತರು ನಿಜ, ಆದರೆ ತಾನು ಕಾಂಗ್ರೆಸ್ ಬಂದು ಮತ್ತು ಶಾಸಕನಾಗಿ ಆಯ್ಕೆ ಹೊಂದಿ ಕೇವಲ ಆರು ತಿಂಗಳು ಮಾತ್ರ ಆಗಿದೆ, ಸಂಪುಟ ಪುನಾರಚನೆಯಾದರೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡಿಲ್ಲ, ಮಂತ್ರಿಯಾಗಬೇಕೆನ್ನುವ ಆಸೆಯೂ ತನಗಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು ಎಂದು ಶಾಸಕ ಯೋಗೇಶ್ವರ್ ಹೇಳುತ್ತಾರೆ.
ಬೆಂಗಳೂರು ದಕ್ಷಿಣ, ಜುಲೈ 8: ರಾಮನಗರ ಜಿಲ್ಲೆಯ ಎಲ್ಲ ಶಾಸಕರಿಗೆ ಡಿಕೆ ಶಿವಕುಮಾರ್ (DK Shivakumar) ರಾಜ್ಯದ ಮುಖ್ಯಮಂತ್ರಿ ಅಗೋದು ಬೇಕು, ಆದರೆ ಅವರು ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಅನ್ನುತ್ತಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಸಹ ಅದನ್ನೇ ಹೇಳುತ್ತಾರೆ. ಜನಾಭಿಪ್ರಾಯ ಅದೇ ಆಗಿದೆ ಮತ್ತು ಜಿಲ್ಲೆಯ ಶಾಸಕರು ಸಹ ಅದನ್ನು ಬಯಸುತ್ತೇವೆ, ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆದರೆ ತಮ್ಮ ಪಕ್ಷದ ಹೈಕಮಾಂಡ್ ಅದನ್ನೆಲ್ಲ ತೀರ್ಮಾನಿಸುತ್ತದೆ, ತಾನೇನಿದ್ದರೂ ಅಭಿಪ್ರಾಯ ತಿಳಿಸಬಹುದಷ್ಟೇ ಎಂದು ಯೋಗೇಶ್ವರ್ ಹೇಳಿದರು.
ಇದನ್ನೂ ಓದಿ: ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ₹ 5 ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು: ಯೋಗೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ