ಚಿಕ್ಕಮಗಳೂರು ಜಿಲ್ಲೆ ಸತ್ತಿಗನಹಳ್ಳಿ ಹೊರವಲಯದಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗ, ಆತಂಕದಲ್ಲಿ ಗ್ರಾಮಸ್ಥರು
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅರಣ್ಯ ಪ್ರದೇಶಗಳಲ್ಲಿರುವ ನೀರಿನ ಹೊಂಡ ಮತ್ತು ಹುಲ್ಲುಗಾವಲು ಪ್ರದೇಶಗಳು ಒಣಗಾಲಾರಂಭಿಸುತ್ತವೆ. ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳ ಕಡೆ ಮುಖ ಮಾಡೋದು ಇದಕ್ಕೆ ಮುಖ್ಯ ಕಾರಣವೆನ್ನಲಾಗುತ್ತದೆ. ಹಿಂಸ್ರಪಶುಗಳು ಕುರಿ, ಮೇಕೆ, ಹಸು ಮತ್ತು ನಾಯಿಗಳನ್ನು ಅರಸಿಕೊಂಡು ಊರುಗಳತ್ತ ಬರೋದು ಅಪರೂಪವೇನಲ್ಲ.
ಚಿಕ್ಕಮಗಳೂರು: ಬೇಸಿಗೆ ಶುರುವಾಗುತ್ತಿದ್ದಂತೆಯೇ ವನ್ಯಜೀವಿಗಳು ಊರುಗಳ ಕಡೆ ಬರೋದು ಜಾಸ್ತಿಯಾಗುತ್ತದೆ. ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸತ್ತಿಗನಹಳ್ಳಿಯಲ್ಲಿ ಇಂದು ಬೆಳಗಿನ ಹೊತ್ತಲ್ಲಿ ಒಂಟಿ ಸಲಗವೊಂದು ಲಗ್ಗೆಯಟ್ಟಿದೆ. ಕಾಡಾನೆಗೆ ಭೈರ ಅಂತ ಹೆಸರಿಟ್ಟಿದ್ದಾರಂತೆ. ಮೂಡಿಗೆರೆಯ ಅರಣ್ಯವ್ಯಾಪ್ತಿ ವಲಯದಿಂದ ಸುತ್ತಾಡುತ್ತಾ ಭೈರ ಜನ ವಾಸಮಾಡುವ ಪ್ರದೇಶಕ್ಕೆ ಲಗ್ಗೆಯಿಟ್ಟಿದ್ದಾನೆ. ಅಸಲಿಗೆ ಭೈರ ಗ್ರಾಮಕ್ಕೆ ಹತ್ತಿರದಲ್ಲಿರುವ ಸ್ಥಳದಲ್ಲಿ ಬೀಡು ಬಿಟ್ಟಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ. ಗ್ರಾಮಸ್ಥರಲ್ಲಿ ಸಹಜವಾಗೇ ಆತಂಕ ಮೂಡಿದೆ. ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಅದಷ್ಟ ಬೇಗ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:ಚಿಕ್ಕಮಗಳೂರು: ವಿಠಲ ಗ್ರಾಮದ ಬಳಿ 20 ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ