ವಿಡಿಯೋ ನೋಡಿ: ಟಿಪ್ಪರ್ ಲಾರಿ ಮಾಲೀಕರಿಂದ ‘ಗುಲಾಬಿ’ ಹೋರಾಟ
Lorry Strike In Karnataka: ಹೊಸೂರು ಹೆದ್ದಾರಿ ಅತ್ತಿಬೆಲೆ ಗಡಿ ಬಳಿ ಸಂಚರಿಸುತ್ತಿರುವ ಟ್ರಕ್ಗಳನ್ನು ಟಿಪ್ಪರ್ ಲಾರಿ ಮಾಲೀಕರು ಮತ್ತು ಬೊಮ್ಮಸಂದ್ರ ಇಂಡಸ್ಟ್ರೀಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ ಸದಸ್ಯರು ಅಡ್ಡಗಟ್ಟಿ ಚಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಚಾಲಕರಿಗೆ ಗುಲಾಬಿ ಗುಲಾಬಿ ಹೂ ನೀಡಿ ಮುಷ್ಕರಕ್ಕೆ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ.
ಆನೇಕಲ್, ಜನವರಿ 18: ಹಿಟ್ ಆ್ಯಂಡ್ ರನ್ ಕಾನೂನನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಓನರ್ಸ್ ಅಸೋಸಿಯೇಷನ್ (Lorry Owners Assosiation) ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕದಲ್ಲಿ ಬುಧವಾರ ಮಧ್ಯರಾತ್ರಿಯಿಂದ ಲಾರಿ ಮುಷ್ಕರ (Lorry Strike In Karnataka) ನಡೆಯುತ್ತಿದೆ. ಈ ಮಧ್ಯೆ, ರಾಜ್ಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಹೊರ ರಾಜ್ಯಗಳ ಟ್ರಕ್, ಲಾರಿ ಚಾಲಕರಿಗೆ ಗುಲಾಬಿ ಹೂವು ನೀಡುವ ಮೂಲಕ ಟಿಪ್ಪರ್ ಲಾರಿ ಮಾಲೀಕರು ಮತ್ತು ಬೊಮ್ಮಸಂದ್ರ ಇಂಡಸ್ಟ್ರೀಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ ವಿಭಿನ್ನ ಧರಣಿ ನಡೆಸುತ್ತಿದೆ.
ಹೊಸೂರು ಹೆದ್ದಾರಿ ಅತ್ತಿಬೆಲೆ ಗಡಿ ಬಳಿ ಸಂಚರಿಸುತ್ತಿರುವ ಟ್ರಕ್ಗಳನ್ನು ಟಿಪ್ಪರ್ ಲಾರಿ ಮಾಲೀಕರು ಮತ್ತು ಬೊಮ್ಮಸಂದ್ರ ಇಂಡಸ್ಟ್ರೀಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ ಸದಸ್ಯರು ಅಡ್ಡಗಟ್ಟಿ ಚಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಚಾಲಕರಿಗೆ ಗುಲಾಬಿ ಗುಲಾಬಿ ಹೂ ನೀಡಿ ಮುಷ್ಕರಕ್ಕೆ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 85% ಲಾರಿಗಳು ನಿಂತು ಹೋಗಿವೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡ್ತೀವಿ -ನವೀನ್ ರೆಡ್ಡಿ
ಕೇಂದ್ರದ ಹಿಟ್ ಆ್ಯಂಡ್ ರನ್ ಕಾನೂನು ವಿರೋಧಿಸಿ ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆಕೊಟ್ಟಿವೆ. ಕರ್ನಾಟಕ ಲಾರಿ ಮಾಲೀಕರ ಸಂಘದಿಂದಲೂ ಮಷ್ಕರಕ್ಕೆ ಬೆಂಬಲ ಸಿಕ್ಕಿದೆ. ರಾಜ್ಯದಲ್ಲಿ ಮುಷ್ಕರದ ಕಾರಣ ಸುಮಾರು 2 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ