3 ಅಂತಸ್ತಿನ ಮನೆಯಲ್ಲಿ 3 ಸಹೋದರರ ವಾಸ: ಗಲಭೆಯಿಂದ ಆದ ನಷ್ಟವೆಷ್ಟು?
[lazy-load-videos-and-sticky-control id=”krvgLz3sn7A”] ಬೆಂಗಳೂರು:ಕೆ.ಜಿ.ಹಳ್ಳಿ, ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಹಾಗೂ ಅವರ ಆಸ್ತಿ ಪಾಸ್ತಿಗೆ ಭಾರಿ ಪ್ರಮಾಣದ ಹಾನಿಯಾಗುವುದರಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ತನಗಾಗಿರುವ ನಷ್ಟವನ್ನು ವಿವರವಾಗಿ ತಿಳಿಸಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ನೆಲೆಸಿರುವ ಮೂರು ಅಂತಸ್ತಿನ ಮನೆಯಲ್ಲಿ ಅವರ ಇನ್ನುಳಿದ ಇಬ್ಬರು ಸಹೋದರರು ಸಹ ನೆಲೆಸಿದ್ದಾರೆ. ಹೀಗಾಗಿ ಮನೆ ಸಂಪೂರ್ಣವಾಗಿ ಧ್ವಂಸವಾಗಿದ್ದು, ಮೂವರ ಸಹೋದರರ ಒಟ್ಟು 3 ಕೋಟಿ ಮೌಲ್ಯದ […]
[lazy-load-videos-and-sticky-control id=”krvgLz3sn7A”]
ಬೆಂಗಳೂರು:ಕೆ.ಜಿ.ಹಳ್ಳಿ, ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಹಾಗೂ ಅವರ ಆಸ್ತಿ ಪಾಸ್ತಿಗೆ ಭಾರಿ ಪ್ರಮಾಣದ ಹಾನಿಯಾಗುವುದರಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ತನಗಾಗಿರುವ ನಷ್ಟವನ್ನು ವಿವರವಾಗಿ ತಿಳಿಸಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ನೆಲೆಸಿರುವ ಮೂರು ಅಂತಸ್ತಿನ ಮನೆಯಲ್ಲಿ ಅವರ ಇನ್ನುಳಿದ ಇಬ್ಬರು ಸಹೋದರರು ಸಹ ನೆಲೆಸಿದ್ದಾರೆ. ಹೀಗಾಗಿ ಮನೆ ಸಂಪೂರ್ಣವಾಗಿ ಧ್ವಂಸವಾಗಿದ್ದು, ಮೂವರ ಸಹೋದರರ ಒಟ್ಟು 3 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ ಎನ್ನಲಾಗಿದೆ.
ಶಾಸಕರ ಮನೆಯಲ್ಲಿ ಇದ್ದ 20 ಲಕ್ಷ ಮೌಲ್ಯದ 500 ಗ್ರಾಂ ಆಭರಣ ನಾಪತ್ತೆಯಾಗಿದ್ದು, ಮನೆ ಕಟ್ಟಡ ಸಂಪೂರ್ಣ ನಾಶವಾಗಿದ್ದು 50ಲಕ್ಷ ನಷ್ಟವುಂಟಾಗಿದೆ ಎನ್ನಲಾಗಿದೆ. ಜೊತೆಗೆ ಕಾರು, ಬೈಕ್ ಸೇರಿ 20 ಲಕ್ಷ ಮೌಲ್ಯದ ವಾಹನಗಳು ಬಸ್ಮಾವಾಗಿವೆ ಹಾಗೂ ಶಾಸಕರ ಅಪಾರ ಪ್ರಮಾಣದ ಆಸ್ತಿಯ ಮೂಲ ದಾಖಲೆಗಳು ಸುಟ್ಟು ಭಸ್ಮವಾಗಿವೆ.
ಸೋದರ ಮಹೇಶ್ ಕುಮಾರ್ ಅವರ 10 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದ್ದು, ಮನೆಯಲ್ಲಿದ್ದ 8.5 ಲಕ್ಷ ರೂಪಾಯಿ ಹಣವನ್ನು ಗಲಭೆಕೋರರು ದೋಚಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಸಹೋದರ ಚಂದ್ರಶೇಖರ್ ಅವರ ಮನೆಯನ್ನು ಲೂಟಿ ಮಾಡಿರುವ ಪುಂಡರು 20 ಲಕ್ಷದ ಮೌಲ್ಯದ ಚಿನ್ನಾಭರಣ3ಲಕ್ಷ ನಗದು ಹಣವನ್ನು ಲೂಟಿ ಮಾಡಿದ್ದಾರೆ ಎಂದು ಶ್ರೀನಿವಾಸಮೂರ್ತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Published On - 12:39 pm, Sat, 15 August 20