ಅತ್ತ ಸಿನಿಮಾ ರಿಲೀಸ್​, ಇತ್ತ ಕರ್ನಾಟಕ ಬಂದ್​; ರಚಿತಾ ರಾಮ್​ ಬೆಂಬಲ ಯಾರಿಗೆ?

| Updated By: ಮದನ್​ ಕುಮಾರ್​

Updated on: Dec 27, 2021 | 1:50 PM

Karnataka Bandh: ಡಿ.31ರಂದು ಕರ್ನಾಟಕ ಬಂದ್​ ಮಾಡಲು ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ. ಆದರೆ ರಚಿತಾ ರಾಮ್​ ನಟನೆಯ ‘ಲವ್​ ಯೂ ರಚ್ಚು’ ಚಿತ್ರಕ್ಕೆ ಇದರಿಂದ ತೊಂದರೆ ಆಗುತ್ತಿದೆ.

ರಚಿತಾ ರಾಮ್​ ನಟನೆಯ ‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಡಿ.31ರಂದು ಬಿಡುಗಡೆ ಆಗುತ್ತಿದೆ. ಅದೇ ದಿನ ಕರ್ನಾಟಕ ಬಂದ್​ (Karnataka Bandh) ಕೂಡ ಆಗುತ್ತಿದೆ. ಆ ಬಗ್ಗೆ ರಚಿತಾ ರಾಮ್ (Rachita Ram) ಮಾತನಾಡಿದ್ದಾರೆ. ‘ಸಿನಿಮಾಗಾಗಿ ನಮ್ಮ ನಿರ್ಮಾಪಕರು ತುಂಬ ಫೈಟ್​ ಮಾಡುತ್ತಿದ್ದಾರೆ. ಎಲ್ಲಿಂದಲೋ ದುಡ್ಡು ತೆಗೆದುಕೊಂಡು ಬಂದು ಸಿನಿಮಾ ಮಾಡಿ, ಕಷ್ಟಪಡುತ್ತಿದ್ದಾರೆ. ಒಂದು ಕಡೆ ನಮ್ಮ ರಾಜ್ಯಕ್ಕೋಸ್ಕರ ನಾವು ಸಪೋರ್ಟ್​ ಮಾಡಬೇಕಾಗುತ್ತದೆ. ಇನ್ನೊಂದು ಕಡೆ ನಮ್ಮ ಸಿನಿಮಾ ಇದೆ. ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಒಂದು ಕಡೆ ನಮ್ಮ ಪ್ರೊಡ್ಯೂಸರ್​, ಇನ್ನೊಂದು ಕಡೆ ನಮ್ಮ ರಾಜ್ಯ. ಎರಡೂ ಕಡೆಗೆ ನನ್ನ ಬೆಂಬಲ ಇದೆ. ಆದರೆ ನಮ್ಮ ರಾಜ್ಯಕ್ಕಾಗಿ ಹೆಚ್ಚು ಸಪೋರ್ಟ್​ ಇರುತ್ತೆ’ ಎಂದು ರಚಿತಾ ಹೇಳಿದ್ದಾರೆ.

ಇದನ್ನೂ ಓದಿ:

‘ನಾನು ಸಿಗರೇಟ್​ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್​ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ

‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್​ ರಾವ್​-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು