ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಬೆಳಗಾವಿ ಪಂಡಿತರ ಸ್ಫೋಟಕ ಭವಿಷ್ಯ

Edited By:

Updated on: Mar 03, 2026 | 4:54 PM

2026ರ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಹಲವು ಪ್ರಮುಖ ದೇವಾಲಯಗಳು ಇಂದು (ಮಾರ್ಚ್ 03) ಮಧ್ಯಾಹ್ನದ ಪೂಜೆಯ ಬಳಿಕ ಬಂದ್ ಆಗಿದ್ದು, ಸಂಜೆ 6:48ಕ್ಕೆ ಗ್ರಹಣ ಮೋಕ್ಷವಾದ ನಂತರ ಶುದ್ಧೀಕರಣ ಪೂಜೆಗಳೊಂದಿಗೆ ಮತ್ತೆ ದೇಗುಲ ಬಾಗಿಲು ತೆರೆಯಲಾಗುತ್ತದೆ. ಇನ್ನು ಈ ಗ್ರಹಣದ ಬಗ್ಗೆ ಅಯೋಧ್ಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮುಹೂರ್ತ ನೀಡಿದ್ದ ಪಂಡಿತ ವಿಜಯೇಂದ್ರ ಶರ್ಮಾ ಪ್ರತಿಕ್ರಿಯಿಸಿದ್ದು,ಭಾರತದಲ್ಲಿ ಸಂಜೆ 6.26ರಿಂದ 6.50ರ ವರೆಗೆ ಚಂದ್ರ ಗ್ರಹಣ ಗೋಚರವಾಗಲಿದೆ. ಈ ವೇಳೆ ಸ್ನಾನ, ಜಪ, ಕೂಲದೇವರ ನಾಮಸ್ಮರಣೆ ಮಾಡಬೇಕು ಎಂದಿದ್ದಾರೆ.

ಬೆಳಗಾವಿ, ಮಾರ್ಚ್ 03): 2026ರ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ (Lunar Eclipse 2026) ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಹಲವು ಪ್ರಮುಖ ದೇವಾಲಯಗಳು ಇಂದು (ಮಾರ್ಚ್ 03) ಮಧ್ಯಾಹ್ನದ ಪೂಜೆಯ ಬಳಿಕ ಬಂದ್ ಆಗಿದ್ದು, ಸಂಜೆ 6:48ಕ್ಕೆ ಗ್ರಹಣ ಮೋಕ್ಷವಾದ ನಂತರ ಶುದ್ಧೀಕರಣ ಪೂಜೆಗಳೊಂದಿಗೆ ಮತ್ತೆ ದೇಗುಲ ಬಾಗಿಲು ತೆರೆಯಲಾಗುತ್ತದೆ. ಇನ್ನು ಈ ಗ್ರಹಣದ ಬಗ್ಗೆ ಅಯೋಧ್ಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮುಹೂರ್ತ ನೀಡಿದ್ದ ಪಂಡಿತ ವಿಜಯೇಂದ್ರ ಶರ್ಮಾ ಪ್ರತಿಕ್ರಿಯಿಸಿದ್ದು,ಭಾರತದಲ್ಲಿ ಸಂಜೆ 6.26ರಿಂದ 6.50ರ ವರೆಗೆ ಚಂದ್ರ ಗ್ರಹಣ ಗೋಚರವಾಗಲಿದೆ. ಈ ವೇಳೆ ಸ್ನಾನ, ಜಪ, ಕೂಲದೇವರ ನಾಮಸ್ಮರಣೆ ಮಾಡಬೇಕು ಎಂದಿದ್ದಾರೆ.

ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಬಗ್ಗೆ ಮಾತನಾಡಿದ್ದು, ಚಂದ್ರ ಗ್ರಹಣದಿಂದ ಸ್ವಲ್ಪ ಮಟ್ಟಿಗೆ ಕೆಡಕಾಗುತ್ತೆ. ದೇವರ ಜಪ ಪೂಜೆಗಳಿಂದ ಎಲ್ಲವೂ ಸರಿ ಆಗುತ್ತೆ. ಯುದ್ದದ ಕಾರ್ಮೋಡ ಕಳೆದು ಹೋಗಲಿದೆ. ಭಾರತದ ಜೊತೆಗೆ ಯಾವ ಯುದ್ದಗಳು ಆಗುವುದಿಲ್ಲ. ಪ್ರಧಾನಿ ನರೇಂದ್ರ‌ ಮೋದಿಯವರಿಗೂ ಕಷ್ಟ ಇದೆ. ಜೂನ್ ವರೆಗೂ ಮೋದಿ ಅವರಿಗೂ ಕಷ್ಟ ಇದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More