Video: ಮಹಾಕುಂಭ ಮೇಳ, ಸಂಗಮದಲ್ಲಿ ಗಂಗಾ ಮಾತೆಗೆ ನಮಸ್ಕರಿಸಿದ ಮೋದಿ

Video: ಮಹಾಕುಂಭ ಮೇಳ, ಸಂಗಮದಲ್ಲಿ ಗಂಗಾ ಮಾತೆಗೆ ನಮಸ್ಕರಿಸಿದ ಮೋದಿ

ನಯನಾ ರಾಜೀವ್
|

Updated on: Feb 05, 2025 | 12:50 PM

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮುಳುಗೆದ್ದು ಬಳಿಕ ಗಂಗಾ ಮಾತೆಗೆ ನಮಸ್ಕರಿಸಿದ್ದಾರೆ. ಮೊದಲು ತ್ರಿವೇಣಿ ಸಂಗಮದಲ್ಲಿ ಮೋದಿ ಸ್ನಾನ ಮಾಡುವಾಗ ಕೈಯಲ್ಲಿ ಹಾಗೂ ಕುತ್ತಿಗೆಯಲ್ಲಿ ರುದ್ರಾಕ್ಷಿ ಧರಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿದ್ದರು ಆದರೆ ಪ್ರಧಾನಿ ಒಬ್ಬರೇ ಸ್ನಾನ ಮಾಡಿದರು

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮುಳುಗೆದ್ದು ಬಳಿಕ ಗಂಗಾ ಮಾತೆಗೆ ನಮಸ್ಕರಿಸಿದ್ದಾರೆ. ಮೊದಲು ತ್ರಿವೇಣಿ ಸಂಗಮದಲ್ಲಿ ಮೋದಿ ಸ್ನಾನ ಮಾಡುವಾಗ ಕೈಯಲ್ಲಿ ಹಾಗೂ ಕುತ್ತಿಗೆಯಲ್ಲಿ ರುದ್ರಾಕ್ಷಿ ಧರಿಸಿದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿದ್ದರು ಆದರೆ ಪ್ರಧಾನಿ ಒಬ್ಬರೇ ಸ್ನಾನ ಮಾಡಿದರು. ಈ ಸಮಯದಲ್ಲಿ ಸಿಆರ್‌ಪಿಎಫ್ ಮತ್ತು ಸೇನಾ ಸಿಬ್ಬಂದಿ ಕೂಡ ಅಲ್ಲಿದ್ದರು. ಪ್ರಧಾನಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯಮುನಾ ನದಿಯಲ್ಲಿ ದೋಣಿ ವಿಹಾರ ನಡೆಸಿದರು. ಫೆಬ್ರವರಿ 26ರ ಮಹಾಶಿವರಾತ್ರಿವರೆಗೂ ಕುಂಭ ಮೇಳ ಇರಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ