Loading video

ಮಹಾ ಶಿವರಾತ್ರಿ: ಮೈಸೂರಿನ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ

| Updated By: ವಿವೇಕ ಬಿರಾದಾರ

Updated on: Feb 26, 2025 | 8:39 AM

ಮೈಸೂರಿನ ಅರಮನೆಯ ತ್ರಿನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಧರಿಸಲಾಯಿತು. ಈ ಮುಖವಾಡವನ್ನು ವರ್ಷಕ್ಕೊಮ್ಮೆ ಮಾತ್ರ ಧರಿಸಲಾಗುತ್ತದೆ ಮತ್ತು 1952 ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನನದ ನೆನಪಿಗಾಗಿ ನೀಡಿದ್ದಾರೆ. ವಿವಿಧ ಅಭಿಷೇಕಗಳ ನಂತರ ಚಿನ್ನದ ಮುಖವಾಡವನ್ನು ಧರಿಸಲಾಯಿತು.

ಮೈಸೂರು, ಫೆಬ್ರವರಿ 26: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ತ್ರಿನೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ಚಿನ್ನದ ಮುಖವಾಡ ಧಾರಣೆ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. 1952ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನನದ ನೆನಪಿನಾರ್ಥ ಜಯಚಾಮರಾಜೇಂದ್ರ ಒಡೆಯರ್ ಅವರು ಮುಖವಾಡ ನೀಡಿದ್ದಾರೆ. ಚಿನ್ನದ ಮುಖವಾಡ ಸುಮಾರು 11 ಕೆಜಿ ತೂಕವಿದೆ. ಶಿವಲಿಂಗಕ್ಕೆ ವಿವಿಧ ಅಭಿಷೇಕ ನೆರವೇರಿಸಿ‌ ಬಳಿಕ ಚಿನ್ನದ ಮುಖವಾಡ ಧಾರಣೆ ಮಾಡಲಾಯಿತು. ಗುರುವಾರ (ಫೆ.27) ಬೆಳಗ್ಗೆಯವರೆಗೂ ಚಿನ್ನದ ಕೊಳಗವನ್ನು ಶಿವಲಿಂಗಕ್ಕೆ ಹಾಕಿರಲಾಗಿರುತ್ತದೆ.