ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!

Edited By:

Updated on: Oct 11, 2026 | 12:49 PM

ಮೈಸೂರು ದಸರಾ ಉದ್ಘಾಟನೆ ಸಮೀಪಿಸುತ್ತಿದ್ದಂತೆಯೇ ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಆಯೋಜಿಸಲಾಗಿದ್ದ ನಂದಿ ಧ್ವಜ ಪೂಜೆ ವೇಳೆ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಂದಿ ಧ್ವಜ ಹಿಡಿದು ಕಲಾವಿದರು ಕುಣಿಯುತ್ತಿದ್ದಾಗ ಕಂಬ ಮುರಿದು ಬಿದ್ದಿದ್ದು, ತಕ್ಷಣವೇ ಅದನ್ನು ಸ್ಥಳಾಂತರಿಸಲಾಯಿತು. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ಮೈಸೂರು, ಅಕ್ಟೋಬರ್ 11: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಚಾಮುಂಡಿಬೆಟ್ಟದ ಬಳಿ ಅಪಘಾತವೊಂದು ಸಂಭವಿಸಿದೆ. ಮುಖ್ಯಮಂತ್ರಿಯವರ ಸ್ವಾಗತಕ್ಕಾಗಿ ತರಲಾಗಿದ್ದ ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ ಏಕಾಏಕಿ ನಂದಿ ಧ್ವಜದ ಕಂಬ ಮುರಿದುಬಿದ್ದಿದೆ.

ಚಾಮುಂಡಿಬೆಟ್ಟದ ಮಹಿಷ ಪ್ರತಿಮೆ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಕಂಬ ಮುರಿದ ತಕ್ಷಣ ಎಚ್ಚೆತ್ತುಕೊಂಡ ಕಲಾವಿದರು ಯಾವುದೇ ತೊಂದರೆಯಾಗದಂತೆ ಕೂಡಲೇ ಮುರಿದುಬಿದ್ದ ನಂದಿ ಧ್ವಜ ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಿದರು. ದಸರಾ ಆರಂಭದ ದಿನವೇ ಈ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಮತ್ತು ಕಲಾ ತಂಡಗಳಲ್ಲಿ ಸ್ವಲ್ಪಕಾಲ ಆತಂಕ ಮೂಡಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​