ಕೇಕ್ ಕಂಪನಿಯ ಮಕ್ಕಾ ಇ-ವಾಹನ ತೂಕದಲ್ಲಿ ಹಗುರವಾದರೂ ಬೆಲೆಯಲ್ಲಿ ಮಾತ್ರ ಭಾರಿ ಭಾರ, ಭಾರತದಲ್ಲಿ ಇನ್ನೂ ಲಭ್ಯವಿಲ್ಲ!
ಮಕ್ಕಾ ಇ-ವಾಹನವು ಕೇಕ್‌ನ ಇತರ ವಾಹನಗಳಿಗಿಂತ ಭಿನ್ನವಾಗಿದೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅವುಗಳಿಗಿಂತ ಒಂದು ಹೆಜ್ಜೆ ಮುಂದಿದೆ.
ಎಲೆಕ್ಟ್ರಿಕ್ ಬೈಕ್ ಗಳನ್ನು ತಯಾರಿಸುವ ಸ್ವೀಡನ್ನಿನ ಕೇಕ್ ಸಂಸ್ಥೆಯು ತನ್ನ ಹೊಸ ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಿ ಅದಕ್ಕೆ ಮಕ್ಕಾ ಎಂದು ಹೆಸರಿಟ್ಟಿದೆ. ಹೊಟ್ಟಿನಂತೆ ಹಗುರವಾಗಿರುವ ಈ ವಾಹನವು ನಗರ ಪ್ರದೇಶಗಳಲ್ಲಿ ಓಡಾಡುವುದಕ್ಕೆ ಹೇಳಿ ಮಾಡಿಸಿದಂತಿದೆ. ಇದರ ಬೆಲೆಯೇನೂ ಕಡಿಮೆ ಇಲ್ಲ. ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಸುಮಾರು ರೂ. 2.5 ಲಕ್ಷ ಆಗುತ್ತದೆ. ಆದರೆ ಈ ಬೈಕ್ ಅನ್ನು ಇಂಡಿಯನಲ್ಲಿ ಲಾಂಚ್ ಮಾಡುವ ಬಗ್ಗೆ ಕಂಪನಿ ಇನ್ನೂ ಯಾವುದೇ ಸುಳಿವು ನೀಡಿಲ್ಲ. ಸದ್ಯಕ್ಕಿದು ಯುರೋಪ್ ಮತ್ತು ಅಮೇರಿಕಾದಲ್ಲಿ ಮಾತ್ರ ಲಭ್ಯವಿದೆ.
ಮಕ್ಕಾ ಇ-ವಾಹನವು ಕೇಕ್‌ನ ಇತರ ವಾಹನಗಳಿಗಿಂತ ಭಿನ್ನವಾಗಿದೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅವುಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಅಸಲಿಗೆ ಕೇಕ್ ಸಂಸ್ಥೆಯು ಆಫ್-ರೋಡ್ ಮೋಟಾರ್‌ಬೈಕ್‌ಗಳಿಗೆ ಹೆಸರುವಾಸಿಯಾಗಿದೆ. ಈ ಮೂರನೇ ಪ್ಲಾಟ್‌ಫಾರ್ಮ್ ಕೇಕ್‌ನ ಮೊದಲ ಮೋಟಾರ್ ಬೈಕ್ ಆಗಿದ್ದು, ನಗರ ಸವಾರಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟಿದೆ. ಅಲ್ಪ ದೂರ ಮತ್ತು ವಾಣಿಜ್ಯ ಸಾರಿಗೆ ಮತ್ತು ಪ್ರಯಾಣದ ಅನುಕೂಲತೆಗಳಿಗೆ ವಿನ್ಯಾಸಗೊಳಿಸಲಾಗಿದೆ.
ಕಂಪನಿಯು ಇತ್ತೀಚಿಗೆ ನೀಡಿರುವ ಹೇಳಿಕೆಯೊಂದರಲ್ಲಿ ‘ಹೊಸ ಎಲೆಕ್ಟ್ರಿಕ್ ಮೊಪೆಡ್‌ಗಳು ದ್ವಿಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಸರ್ವರಿಗೂ ತಲುಪುವಂತೆ ಮಾಡುವ ಕೇಕ್‌ನ ಮಹತ್ವಾಕಾಂಕ್ಷೆಯ ಪ್ರತೀಕವಾಗಿವೆ. ಹಾಗೆಯೇ ಶೂನ್ಯ-ಎಮಿಷನ್ ಜೀವನಶೈಲಿಯ ಕಡೆಗೆ ಸ್ಫೂರ್ತಿ ನೀಡುವ ಕಂಪನಿಯ ಧ್ಯೇಯಕ್ಕೆ ಅನುಗುಣವಾಗಿ ಕಾರ್ಯಕ್ಷಮತೆ, ಬಾಳಿಕೆ ಮತ್ತು ಪ್ರಸ್ತುತತೆಯನ್ನು ಪ್ರತಿಪಾದಿಸುತ್ತವೆ,’ ಅಂತ ತಿಳಿಸಿದೆ.