Kaatera Press Meet: ದರ್ಶನ್​ ಜೊತೆ ವೇದಿಕೆಯಲ್ಲಿ ಕುಳಿತ ಮಗಳು ಆರಾಧನಾ ಬಗ್ಗೆ ಮಾಲಾಶ್ರೀ ಹೇಳಿದ್ದೇನು?

Kaatera Malashree Speech: ಹಿರಿಯ ಕಲಾವಿದೆ ಮಾಲಾಶ್ರೀ ಅವರ ಪುತ್ರಿ ಆರಾಧನಾ ‘ಕಾಟೇರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದು (ಸೆ.11) ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದ್ದು, ಅದರಲ್ಲಿ ಮಾಲಾಶ್ರೀ ಭಾಗಿ ಆಗಿದ್ದಾರೆ. ಮಾಧ್ಯಮಗಳ ಎದುರು ಮಗಳ ಕುರಿತು ಅವರು ಒಂದಷ್ಟು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಬಹುನಿರೀಕ್ಷಿತ ‘ಕಾಟೇರ’ ಸಿನಿಮಾ (Kaatera movie) ಶೂಟಿಂಗ್​ ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಮಾಲಾಶ್ರಿ ಮಗಳು ಆರಾಧನಾ (Aradhana) ಅವರು ದರ್ಶನ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಗೆ ಮಾಲಾಶ್ರೀ ಹಾಜರಿ ಹಾಕಿದ್ದಾರೆ. ಮಗಳ ನಟನೆ ಬಗ್ಗೆ ಅವರು ಹೆಮ್ಮೆಯಿಂದ ಮಾತನಾಡಿದ್ದಾರೆ. ‘ನನ್ನ ಮಗಳ ಮೇಲೆ ನಿಮ್ಮ ಆಶೀರ್ವಾದ ಇರಲಿ. ರಾಕ್​ಲೈನ್​ ವೆಂಕಟೇಶ್​ ಅವರಂತಹ ದೊಡ್ಡ ನಿರ್ಮಾಪಕರಿಂದ ನನ್ನ ಮಗಳು ಲಾಂಚ್​ ಆಗುತ್ತಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ದರ್ಶನ್​ ಅವರಿಂದಾಗಿ ಆಕೆ ಸುಲಭವಾಗಿ ನಟಿಸುತ್ತಿದ್ದಾಳೆ. ಪ್ರತಿ ದಿನ ಆಕೆ ಹೊಸದನ್ನು ಕಲಿಯುತ್ತಿದ್ದಾಳೆ. ಅಂಥ ಒಳ್ಳೆಯ ಕಲಾವಿದರ ಜೊತೆ ನಟಿಸುವ ಅವಕಾಶ ಅವಳಿಗೆ ಸಿಕ್ಕಿದೆ’ ಎಂದು ಮಾಲಾಶ್ರೀ (Malashree) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:24 pm, Mon, 11 September 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us