ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಸಿ ಮಹಿಳೆಯರಿಗೆ ಸೀರೆ ಹಂಚಿದ ಮಾಲೂರು ಶಾಸಕ ಕೆವೈ ನಂಜೇಗೌಡ

|

Updated on: Mar 12, 2024 | 7:13 PM

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾವು ಇದನ್ನೆಲ್ಲ ನೋಡಿದ್ದೆವು. ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಸೀರೆ, ಕುಕ್ಕರ್, ಫ್ಯಾನ್, ದಿನಸಿ ಪೊಟ್ಟಣ, ಇಸ್ತ್ರಿ ಮೊದಲಾದವುಗಳನ್ನು ಹಂಚುತ್ತಿದ್ದ ವಿಡಿಯೋಗಳನ್ನು ನಾವು ತೋರಿಸಿದ್ದೇವೆ. ಈಗ ಲೋಕಸಭಾ ಚುನಾವಣೆಯ ಶೆಡ್ಯೂಲ್ ಪ್ರಕಟವಾಗಿದೆ, ಮಾದರಿ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲು ಅಭ್ಯರ್ಥಿಗಳು ಮತದಾರರಿಗೆ ಸೀರೆ, ಇನ್ನಿತರ ವಸ್ತುಗಳನ್ನು ಹಂಚುವ ಕಾರ್ಯಕ್ರಮ ಶುರವಿಟ್ಟುಕೊಳ್ಳಲಿದ್ದಾರೆ.

ಕೋಲಾರ: ಇನ್ನು ಮುಂದೆ ಇಂಥ ದೃಶ್ಯಗಳು ಸಾಮಾನ್ಯವಾಗಲಿವೆ. ರಾಜ್ಯದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಈಗಾಗಲೇ ಘೋಷಿಸಿ ಜಾರಿಗೊಳಿಸಿರುವ ಕೆಲ ಗ್ಯಾರಂಟಿಗಳ ಜೊತೆಗೆ ಸೀರೆ ಭಾಗ್ಯ ಸೇರಿಬಿಟ್ಟಿದೆ ಮಾರಾಯ್ರೇ. ಜಿಲ್ಲೆಯ ಮಾಲೂರುನಲ್ಲಿ ಕಾಂಗ್ರೆಸ್ ಶಾಸಕ (Malur Congress MLA) ಕೆವೈ ನಂಜೇಗೌಡ (KY Nanje Gowda) ಇಂದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ (guarantee scheme beneficiaries) ಆಯೋಜಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದವರಿಗೆ ಊಟದ ವ್ಯವಸ್ಥೆ ಮಾಡದಿದ್ದರೆ ಅದು ಸಮಾವೇಶ ಅನಿಸಿಕೊಳ್ಳುವುದಿಲ್ಲ. ನಂಜೇಗೌಡರು ಊಟದ ವ್ಯವಸ್ಥೆ ಜೊತೆ ಬೋನಸ್ ಸಹ ನೀಡಿದರು. ದೃಶ್ಯಗಳಲ್ಲಿ ನಿಮಗೆ ಕಾಣುತ್ತಿರುವ ಹಾಗೆ, ಮಾಲೂರು ಪಟ್ಟಣ ಕಾಂಗ್ರೆಸ್ ಕಚೇರಿ ಬಳಿ ಫಲಾನುಭವಿ ಮಹಿಳೆಯರಿಗೆ ಸೀರೆ ಹಂಚಲಾಗುತ್ತ್ತಿದೆ! ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾವು ಇದನ್ನೆಲ್ಲ ನೋಡಿದ್ದೆವು. ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಸೀರೆ, ಕುಕ್ಕರ್, ಫ್ಯಾನ್, ದಿನಸಿ ಪೊಟ್ಟಣ, ಇಸ್ತ್ರಿ ಮೊದಲಾದವುಗಳನ್ನು ಹಂಚುತ್ತಿದ್ದ ವಿಡಿಯೋಗಳನ್ನು ನಾವು ತೋರಿಸಿದ್ದೇವೆ. ಈಗ ಲೋಕಸಭಾ ಚುನಾವಣೆಯ ಶೆಡ್ಯೂಲ್ ಪ್ರಕಟವಾಗಿದೆ, ಮಾದರಿ ನೀತಿ ಸಂಹಿತೆ ಜಾರಿಗೊಳ್ಳುವ ಮೊದಲು ಅಭ್ಯರ್ಥಿಗಳು ಮತದಾರರಿಗೆ ಸೀರೆ, ಇನ್ನಿತರ ವಸ್ತುಗಳನ್ನು ಹಂಚುವ ಕಾರ್ಯಕ್ರಮ ಶುರವಿಟ್ಟುಕೊಳ್ಳಲಿದ್ದಾರೆ. ಮಾಲೂರಿನ ಕಾಂಗ್ರೆಸ್ ಶಾಸಕ ಇದಕ್ಕೆ ಇವತ್ತು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮನಸ್ಸಿನೊಳಗೆ ಮಡುಗಟ್ಟಿರುವ ಬೇಗುದಿಯನ್ನು ಲೋಕಸಭಾ ಚುನಾವಣೆ ಬಳಿಕ ಹೊರಹಾಕುವೆ: ಸಿಟಿ ರವಿ