ಹೆಬ್ಬಗೋಡಿಯ ಫ್ಲ್ಯಾಟೊಂದರಲ್ಲಿ ಸಿಲಿಂಡರ್ ಸ್ಪೋಟ, ವ್ಯಕ್ತಿ ಮತ್ತವರ ತಾಯಿಗೆ ಗಂಭೀರ ಗಾಯ
ಸಿಲಿಂಡರ್ ಸ್ಫೋಟಗೊಂಡ ಫ್ಲ್ಯಾಟ್ನಲ್ಲಿ ವಾಸವಾಗಿದ್ದ ಆನಂದಮೂರ್ತಿ ಮತ್ತು ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಆನಂದಮೂರ್ತಿಯವರು ಸ್ಟೋರ್ ರೂಮಿನಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡಿದೆ.
Anekal: ಗ್ಯಾಸ್ ಸಿಲಿಂಡರೊಂದು ಸ್ಫೋಟಗೊಂಡು (cylinder blast) ಆಗಿರುವ ಅನಾಹುತ ನೋಡಿ ಮಾರಾಯ್ರೇ. ಸಿಲಿಂಡರ್ ಸ್ಫೋಟಗೊಂಡ ಸದ್ದು ಎಷ್ಟು ಜೋರು ಮತ್ತು ಕರ್ಕಶವಾಗಿತ್ತೆಂದರೆ ಈ ಪ್ರದೇಶದಲ್ಲಿ ಭೂಕಂಪವಾಗುತ್ತಿದೆಯೇನೋ (earthquake) ಅಂತ ಜನ ಭಾವಿಸಿದ್ದರಂತೆ. ಅಂದಹಾಗೆ ದುರ್ಘಟನೆ ನಡೆದಿರೋದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ (Anekal Taluk) ಹೆಬ್ಬಗೋಡಿಯಲ್ಲಿರುವ ಕಮ್ಮಸಂದ್ರ (Kammasandra) ಫ್ಲ್ಯಾಟ್ ನಲ್ಲಿ. ಸ್ಪೋಟದಿಂದ ಮನೆಛಾವಣಿ ಹಾರಿಹೋಗಿದೆ, ಗೋಡೆಗಳು ಕುಸಿದಿವೆ ಮತ್ತು ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ. ಕೇವಲ ಇದೊಂದೇ ಮನೆಯಲ್ಲ, ಅಕ್ಕಪಕ್ಕದ ಫ್ಲ್ಯಾಟ್ಗಳ ಕಿಟಕಿ ಗಾಜುಗಳು ಒಡೆದು ಚೂರಾಗಿವೆ, ಪಾರ್ಕಿಂಗ್ ಲಾಟ್ ನಲ್ಲಿದ್ದ ಮೂರು ಕಾರುಗಳು ಜಖಂಗೊಂಡಿವೆ. ವಿಡಿಯೋನಲ್ಲಿ ಜಖಂಗೊಂಡಿರುವ ಕಾರುಗಳು ನಿಮಗೆ ಕಾಣುತ್ತವೆ.
ಸಿಲಿಂಡರ್ ಸ್ಫೋಟಗೊಂಡ ಫ್ಲ್ಯಾಟ್ನಲ್ಲಿ ವಾಸವಾಗಿದ್ದ ಆನಂದಮೂರ್ತಿ ಮತ್ತು ಅವರ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಆನಂದಮೂರ್ತಿಯವರು ಸ್ಟೋರ್ ರೂಮಿನಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸದರಿ ಸಿಲಿಂಡರ್ ಬಳಕೆಯಲ್ಲಿರದಿದ್ದರೂ ಅದರ ರೆಗ್ಯುಲೇಟರ್ ಆನ್ ಅಗಿತ್ತಂತೆ.
ವಿಷಯ ತಿಳಿದ ಬಳಿಕ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣವನ್ನು ದಾಖಲಿಸಿvಕೊಂಡಿದ್ದಾರೆ.
ಇದನ್ನೂ ಓದಿ: Video: ಬಂಧಿತ ಸಂಸದೆ ನವನೀತ್ ರಾಣಾ ಆರೋಪಕ್ಕೆ ವಿಡಿಯೋ ಮೂಲಕ ತಿರುಗೇಟು ಕೊಟ್ಟ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ