ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಹಲ್ಲೆ: ಚೆನ್ನೈ ಮೂಲದ ಆರೋಪಿ ಬಂಧನ
Bengaluru News: ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆದಿದೆ. ಮೊಬೈಲ್ ಕಳೆದುಹೋಗಿದೆ ಎಂದು ದೂರು ನೀಡಲು ಬಂದ ಗಜೇಂದ್ರ ಎಂಬಾತ ಈ ಕೃತ್ಯ ಎಸಗಿದ್ದು, ಘಠನೆಯಲ್ಲಿ ಕಾನ್ಸ್ಟೇಬಲ್ ತಲೆ ಪೆಟ್ಟು ಬಿದ್ದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಆಗಸ್ಟ್ 27: ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ನಡೆದ ಈ ಘಟನೆಯಲ್ಲಿ ಶಿಲ್ಪಾ ಎಂಬವರು ಗಂಭೀರ ಗಾಯಗೊಂಡಿದ್ದು, ಚೆನ್ನೈ ಮೂಲದ ಆರೋಪಿ ಗಜೇಂದ್ರನನ್ನು ಬಂಧಿಸಲಾಗಿದೆ. ಮೊಬೈಲ್ ಕಳೆದುಹೋಗಿದೆ ಎಂದು ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದ ಗಜೇಂದ್ರನಿಗೆ, ಆ ಸಮಯದಲ್ಲಿ ಠಾಣೆಯಲ್ಲಿ ತಾವು ಒಬ್ಬರೇ ಇದ್ದುದರಿಂದ ಬೆಳಿಗ್ಗೆ ಬಂದು ದೂರು ನೀಡುವಂತೆ ಶಿಲ್ಪಾ ತಿಳಿಸಿದ್ದರು. ಆದರೆ, ಇದನ್ನು ಕೇಳಿ ಸಿಟ್ಟಾಗಿ ಹೋಗಿದ್ದ ಆತ ರಾಡ್ ತೆಗೆದುಕೊಂಡು ಬಂದು ಠಾಣೆಯಲ್ಲಿ ಕುಳಿತಿದ್ದ ಗರ್ಭಿಣಿ ಶಿಲ್ಪಾ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

