ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್-ಬಿಜೆಪಿ ಮೈತ್ರಿ ಮುನಿಸು; ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಬಿಜೆಪಿ ನಾಯಕರ ಫೋಟೋಗೆ ಇಲ್ಲ ಸ್ಥಾನ!

Edited By:

Updated on: Mar 15, 2026 | 11:38 AM

ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಹೊರತುಪಡಿಸಿ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ.

ಮಂಡ್ಯ, ಮಾರ್ಚ್​ 15: ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಹೊರತುಪಡಿಸಿ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ.

ಈ ನಡೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜೆಡಿಎಸ್ ಮುಖಂಡರು ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಫ್ಲೆಕ್ಸ್​ಗಳಿಂದ ಹೊರಗಿಟ್ಟಿರುವುದು, ಮೈತ್ರಿ ಒಳಗೆ ಭಿನ್ನಾಭಿಪ್ರಾಯಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ ಎನ್ನಲಾಗುತ್ತಿದೆ. ಜೆಡಿಎಸ್ ನಾಯಕರ ಈ ನಡೆಯಿಂದ ಮಂಡ್ಯದ ಬಿಜೆಪಿ ಮುಖಂಡರು ಸಹ ಜೆಡಿಎಸ್ ನಾಯಕರ ವಿರುದ್ಧ ಮುನಿಸುಗೊಂಡಿದ್ದಾರೆ. ಈ ಘಟನೆಯು ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More