AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ

ಭೀಮೇಶ್​​ ಪೂಜಾರ್
| Edited By: |

Updated on:May 24, 2026 | 9:59 AM

Share

ಮಂತ್ರಾಲಯದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ಪರದಾಡಿದ್ದಾರೆ. ಮಳೆ ಹೆಚ್ಚಾದ ಕಾರಣ ಶ್ರೀಗಳು ಭಕ್ತರ ಅನುಕೂಲಕ್ಕಾಗಿ ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಲ್ಲಿ ಮಲಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದರು. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಭಕ್ತರಿಗೆ ಸೂಚನೆ ನೀಡಲಾಯಿತು.

ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ ಬಂದು ವ್ಯವಸ್ಥೆ ಮಾಡಿದ್ದು ಗಮನಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 24, 2026 09:57 AM
Follow Us
Bhemesh Poojar
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More