ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಹಲವಾರು ವೀಡಿಯೊಗಳಲ್ಲಿ ಮುಂಬೈನ ವಿಲೇ ಪಾರ್ಲೆ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಒಳಗೆ ದಟ್ಟವಾದ ಹೊಗೆ ಬರುತ್ತಿರುವುದನ್ನು ನೋಡಬಹುದು. ಇಂದು ಸಂಜೆ 6 ಗಂಟೆಗೆ ಆಸನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಮುಂಬೈ, ಏಪ್ರಿಲ್ 9: ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mumbai Airport) ಟರ್ಮಿನಲ್ 1 ಬಿ ಒಳಗೆ ಇಂದು ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಟರ್ಮಿನಲ್ ಒಳಗಿನ ಕೇಬಲ್ ಟ್ರೇಗಳು ಮತ್ತು ಸ್ವಿಚ್ ಬಾಕ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ಹೇಳಿದ್ದಾರೆ. ಬೆಂಕಿ ಟರ್ಮಿನಲ್‌ನ ನೆಲ ಮಹಡಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದು ಮಾಹಿತಿ ಪಡೆದ ಕೂಡಲೇ ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಮತ್ತು ವಾರ್ಡ್ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಲ್ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು

