Loading video

ಭೂಮಿಕ್​​ನನ್ನು ಕಳೆದುಕೊಂಡಿರುವ ಲಕ್ಷ್ಮಣ ಅವರಿಗೆ ಸಮಾಧಾನ ಹೇಳಲು ಬಂದಿದ್ದೇನೆ, ರಾಜಕೀಯಕ್ಕಲ್ಲ: ಅರ್ ಅಶೋಕ

Updated on: Jun 10, 2025 | 2:49 PM

ಲಕ್ಷ್ಮಣ ಮತ್ತು ಭೂಮಿಕ್ ಇಬ್ಬರು ದಯಾಮಯಿಗಳು, ಭೂಮಿಕ್ ಕಾಣಿಸದ ಕಾರಣ ಇವರ ಸಾಕುನಾಯಿ ಕಳೆದ 3-4 ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ಅಶೋಕ ಹೇಳುತ್ತಾರೆ. ಆರ್​ಸಿಬಿ ಟೀಮಿನ ವಿಜಯೋತ್ಸವವನ್ನು ಒಂದೆರಡು ದಿನಗಳ ನಂತರ ಆಯೋಜನೆ ಮಾಡಿದ್ದರೆ ದುರಂತ ನಡೆಯುತ್ತಿರಲಿಲ್ಲ, ಲಕ್ಷಾಂತರ ಜನ ಸೇರಿದ ಜಾಗದಲ್ಲಿ ಒಂದೇಒಂದು ಅಂಬ್ಯುಲೆನ್ಸ್ ಕೂಡ ಇರಲಿಲ್ಲ ಎಂದು ಲಕ್ಷ್ಮಣ ಹೇಳುತ್ತಾರೆ ಎಂದು ಅಶೋಕ ಹೇಳಿದರು.

ನೆಲಮಂಗಲ, ಜೂನ್ 10: ವಿರೋಧ ಪಕ್ಷದ ನಾಯಕ ಅರ್ ಅಶೋಕ ಮತ್ತು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರಾಜು ಇಂದು ಬೆಂಗಳೂರು ಕಾಲ್ತುಳಿತದ ಘಟನೆಯಲ್ಲಿ ಮಡಿದ ಭೂಮಿಕ್ ತಂದೆ ಡಿಟಿ ಲಕ್ಷ್ಮಣ (DT Lakshman) ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಜೂನ್ 4 ರಂದು ಅಶೋಕ ಮತ್ತು ಅವರ ಎಡಭಾಗದಲ್ಲಿ ಕುಳಿತಿರುವ ಪಕ್ಷದ ಧುರೀಣ ಸುರೇಶ್ ಬಹಳ ಸಹಾಯ ಮಾಡಿದ್ದರು ಎಂದು ಲಕ್ಷ್ಮಣ ಹೇಳಿದರು. ನಂತರ ಮಾತಾಡಿದ ಅಶೋಕ ತಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ, ಇದ್ದೊಬ್ಬನೇ ಮಗನನ್ನು ಕಳೆದುಕೊಂಡು ಒಂದು ವಾರದಿಂದ ಒಂದೇ ಸಮ ರೋದಿಸುತ್ತಿರುವ ಲಕ್ಷ್ಮಣ ಅವರಿಗೆ ಸಮಾಧಾನ ಹೇಳಲು ಬಂದಿದ್ದೇನೆ ಎಂದರು. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದವರಾಗಿರುವ ಲಕ್ಷ್ಮಣ ಅವರು ನೆಲಮಂಗಲದಲ್ಲಿ ಇಂದು ಚಿಕ್ಕ ಕಂಪನಿ ನಡೆಸುತ್ತಾರೆ ಮತ್ತು ಸುಮಾರು 30 ಜನರಿಗೆ ಉದ್ಯೋಗದಾತರಾಗಿದ್ದಾರೆ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:   ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ಶಾಸಕರ 1 ತಿಂಗಳ ಸಂಬಳ ನೀಡುತ್ತೇವೆ: ಆರ್ ಅಶೋಕ್​

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ