ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ:ಮೈಸೂರು ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು

Updated on: Sep 22, 2026 | 10:19 PM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಇನ್ನು ಈ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಹೊಸ ಮನೆ ಗೃಹ ಪ್ರವೇಶ ಆಗಿರುವುದು ಗೊತ್ತಾಗಿದ್ದೇ ಮಾಧ್ಯಮಗಳಿಂದ. ಅವರು ಯಾರಿಗೂ ಕರೆದಿಲ್ಲ. ಅವರೇನು ದೊಡ್ಡದಾಗಿ ಪ್ಯಾಲೆಸ್ ಕಟ್ಟಿಲ್ಲ. ಎರಡೂ ಬಾರಿ ಮುಖ್ಯಮಂತ್ರಿಯಾಗಿದ್ದರೂ ಸಹ ಮೈಸೂರಿನಲ್ಲಿ ಅವರಿಗೆ ಒಂದು ಸ್ವಂತ ಮನೆ ಇರಲಿಲ್ಲ. ಈಗ ಏನು ಸಣ್ಣದಾಗಿ ಮನೆ ಕಟ್ಟಿಕೊಂಡು ಮೊನ್ನೆ ಪೂಜೆ ಮಾಡಿ ಗೃಹ ಪ್ರವೇಶ ಮಾಡಿದ್ದಾರೆ ಎಂದರು.

ಬೆಂಗಳೂರು, (ಸೆಪ್ಟೆಂಬರ್ 16): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಂದು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಇನ್ನು ಈ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಹೊಸ ಮನೆ ಗೃಹ ಪ್ರವೇಶ ಆಗಿರುವುದು ಗೊತ್ತಾಗಿದ್ದೇ ಮಾಧ್ಯಮಗಳಿಂದ. ಅವರು ಯಾರಿಗೂ ಕರೆದಿಲ್ಲ. ಅವರೇನು ದೊಡ್ಡದಾಗಿ ಪ್ಯಾಲೆಸ್ ಕಟ್ಟಿಲ್ಲ. ಎರಡೂ ಬಾರಿ ಮುಖ್ಯಮಂತ್ರಿಯಾಗಿದ್ದರೂ ಸಹ ಮೈಸೂರಿನಲ್ಲಿ ಅವರಿಗೆ ಒಂದು ಸ್ವಂತ ಮನೆ ಇರಲಿಲ್ಲ. ಈಗ ಏನು ಸಣ್ಣದಾಗಿ ಮನೆ ಕಟ್ಟಿಕೊಂಡು ಮೊನ್ನೆ ಪೂಜೆ ಮಾಡಿ ಗೃಹ ಪ್ರವೇಶ ಮಾಡಿದ್ದಾರೆ ಎಂದರು.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More