ಬಸ್ಗೆ ಚಾಲನೆ ನೀಡಿ ಅದರಲ್ಲೇ ಪ್ರಯಾಣಿಸಿ ಜನರ ಕುಂದು-ಕೊರತೆ ಅಲಿಸಿದ ಸಕಲೇಶಪುರ ಶಾಸಕ ಸಿಮೆಂಟ್ ಮಂಜು
ಶಾಸಕರು ಮಂತ್ರಿಗಳು ಸರ್ಕಾರೀ ಬಸ್ಸುಗಳಲ್ಲಿ ಪ್ರಯಾಣಿಸುವುದು ಹೊಸದೇನಲ್ಲ ಮತ್ತು ವಿಶೇಷವೂ ಅಲ್ಲ. ಯಾಕೆಂದರೆ ಇಂಥ ಹಲವಾರು ಪ್ರಸಂಗಗಳನ್ನು ನಾವು ನೋಡುತ್ತೇವೆ. ಹಿಂದೆ ಕಡೂರು ಶಾಸಕರಾಗಿದ್ದ ವೈಎಸ್ವಿ ದತ್ತ ಮಂತ್ರಿಯಾದ ಬಳಿಕವೂ ಕೆಎಸ್ಆರ್ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಸಿಮೆಂಟ್ ಮಂಜು ತಮ್ಮ ಬಸ್ ಪ್ರಯಾಣವನ್ನು ಜನರ ಸಮಸ್ಯೆಗಳನನ್ನು ಆಲಿಸಲು ಬಳಸಿದ್ದು ಅಭಿನಂದನೀಯ.
ಹಾಸನ: ಈ ವಿಡಿಯೋದಲ್ಲಿ ವಿಶಿಷ್ಟವಾಗಿರುವುದೇನೂ ಇಲ್ಲ, ಅದರೆ ಜನಪ್ರತಿನಿಧಿಯಾಗಿರುವ ವ್ಯಕ್ತಿಗೆ ತನ್ನ ಕ್ಷೇತ್ರದ ಬಗ್ಗೆ ಇರಬೇಕಾದ ಕಾಳಜಿಯನ್ನು ಇದು ವಿವರಿಸುತ್ತದೆ. ಬಸ್ನಲ್ಲಿ ಜನಸಾಮಾನ್ಯನಂತೆ ಪ್ರಯಾಣಿಸುತ್ತರುವವರು ಸಕಲೇಶಪುರ ಭಾಗದ ಜನಕ್ಕೆ ಚೆನ್ನಾಗಿ ಗೊತ್ತಿರುತ್ತಾರೆ ಅದರೆ ರಾಜ್ಯ ಬೇರೆ ಪ್ರದೇಶಗಳ ಜನಕ್ಕೆ ಅಷ್ಟು ಗೊತ್ತಿರಲಾರರು. ಅಂದಹಾಗೆ, ಇವರು ಆಲೂರು ಸಕಲೇಶಪುರ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು. ವಿಷಯವೇನೆಂದರೆ ಶಾಸಕ ಸಕಲೇಶಪುರದಿಂದ ಹೊಂಗಡಹಳ್ಳ ಗ್ರಾಮಕ್ಕೆ ಕಡಗರಹಳ್ಳಿ, ಹಿರಿದನಹಳ್ಳಿ ಮಾರ್ಗವಾಗಿ ಹೋಗುವ ನೂತನ ಬಸ್ಗೆ ಚಾಲನೆ ನೀಡಿದ್ದಾರೆ. ಬಸ್ ಗೆ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬಸ್ ಚಾಲನೆ ನೀಡಿದ ಬಳಿಕ ಶಾಸಕ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ ಮತ್ತು ಜನರ ಕುಂದುಕೊರತೆಗಳನ್ನು ಆಲಿಸುತ್ತಾರೆ. ಅವರು ಬಸ್ಸಲ್ಲಿ ವಿಧಾನಸಭಾ ಸದಸ್ಯರಿಗೆ ಮೀಸಲಿರುವ ಆಸನದಲ್ಲಿ ಕುಳಿತಿರುವುದನ್ನು ಸಹ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಕಲೇಶಪುರ ಬಳಿಯ ಕೆಎಫ್ಡಿಸಿ ನೆಡುತೋಪಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ರಕ್ರಿಯೆ