ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಮಾಧ್ಯಮಗಳಿಗೆ ಏನನ್ನೂ ಹೇಳದ ಹೆಚ್ ಡಿ ರೇವಣ್ಣ

Updated on: Aug 01, 2025 | 5:55 PM

ಪ್ರಜ್ವಲ್ ರೇವಣ್ಣ ವಿರುದ್ಧ ಬಹಳಷ್ಟು ಸಂತ್ರಸ್ತೆಯರು ಮಾರ್ಯದೆ, ಗೌರವಕ್ಕೆ ಹೆದರಿ ದೂರು ಸಲ್ಲಿಸಿಲ್ಲ. ಕೆಲವಷ್ಟೇ ಜನ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಲ್ಯಾಪ್​ಟಾಪ್​ನಲ್ಲಿದ್ದ ವಿಡಿಯೋಗಳನ್ನು ಪೆನ್​ ಡ್ರೈವ್​ಗಳಿಗೆ ಅಪ್ಲೋಡ್ ಮಾಡಿಕೊಂಡು ಹಾಸನ ನಗರ ಮತ್ತು ಇತರ ಭಾಗಗಳಲ್ಲಿ ಪೆನ್ ಡ್ರೈವ್​​ಗಳನ್ನು ಹಂಚಲಾಗಿತ್ತು.

ಬೆಂಗಳೂರು, ಆಗಸ್ಟ್ 1: ಮಾಜಿ ಸಚಿವ ಮತ್ತು ಹೊಳೆನರಸೀಪುರದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಸ್ಥಿತಿಯನ್ನು ನೋಡಿದರೆ ಅಯ್ಯೋ ಅನಿಸದಿರದು. ಆದರೆ ಗಮನಿಸಬೇಕಾದ ಅಂಶವೆಂದರೆ ಅವರು ಸಹ ಅತ್ಯಾಚಾರದ ಪ್ರಕರಣದಲ್ಲಿ ಅರೋಪಿಯಾಗಿದ್ದಾರೆ ಮತ್ತು ಜಾಮೀನಿನ ಮೇಲೆ ಜೈಲಿಂದ ಹೊರಬಂದಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಇವತ್ತು ಬೆಂಗಳೂರಲ್ಲಿದ್ದ ರೇವಣ್ಣರನ್ನು ಮಾಧ್ಯಮದವರು ಮುತ್ತಿಗೆ ಹಾಕಿ ಅವರ ಮಗ ಪ್ರಜ್ವಲ್ ರೇವಣ್ಣರನ್ನು ಕೋರ್ಟ್ ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿ ಎಂದು ತೀರ್ಪು ನೀಡಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ಒಂದನ್ನೂ ಮಾತಾಡಲಿಲ್ಲ.

ಇದನ್ನೂ ಓದಿ:  ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ