ಕೇಂದ್ರ ಸಂಪುಟ ಪುನಾರಚನೆ: ಮೋದಿ ಹೊಸ ಟೀಂನಲ್ಲಿ HDK ಇರಲ್ವಾ? ಮಾನದಂಡ ಏನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂದಿನ ವಾರವೇ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು 70 ವರ್ಷ ದಾಟಿದ ಸುಮಾರು 14 ಸಚಿವರಿಗೆ ಕೋಕ್ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ, (ಸೆಪ್ಟೆಂಬರ್ 03): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂದಿನ ವಾರವೇ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು 70 ವರ್ಷ ದಾಟಿದ ಸುಮಾರು 14 ಸಚಿವರಿಗೆ ಕೋಕ್ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, 70 ವರ್ಷ ಮೇಲ್ಪಟ್ಟ ಸುಮಾರು 14 ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರ ಸ್ಥಾನಕ್ಕೆ ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸಂಪುಟದಲ್ಲಿ ಹಲವು ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳ ಜವಾಬ್ದಾರಿ ಹೊತ್ತಿರುವ ಹಿನ್ನೆಲೆಯಲ್ಲಿ, ಪುನಾರಚನೆ ವೇಳೆ ಖಾತೆಗಳ ಮರುಹಂಚಿಕೆಗೂ ಆದ್ಯತೆ ಸಿಗಬಹುದು. ಯುವಕರು, ಮಹಿಳೆಯರು ಹಾಗೂ ವಿವಿಧ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡುವ ಅಂಶಗಳು ಕೂಡ ಪ್ರಮುಖವಾಗಬಹುದು.
ಸಂಪುಟ ಪುನರ್‌ರಚನೆಯಲ್ಲಿ ಪೀಳಿಗೆಯ ಬದಲಾವಣೆ ಪ್ರಮುಖ ಅಂಶವಾಗುವ ಸಾಧ್ಯತೆ ಇದೆ. 2024ರಲ್ಲಿ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವರ ಪೈಕಿ ಶೇ.65ಕ್ಕೂ ಹೆಚ್ಚು ಮಂದಿ 51ರಿಂದ 70 ವರ್ಷದೊಳಗಿನವರಾಗಿದ್ದರು. ಸುಮಾರು ಶೇ.24ರಷ್ಟು ಮಂದಿ 31–50ರ ವಯೋಮಾನದವರಾಗಿದ್ದರು. ಈಗ 70 ವರ್ಷ ಮೇಲ್ಪಟ್ಟ ಸಚಿವರೂ ಇದ್ದಾರೆ. ಹೀಗಾಗಿ ಅನುಭವ ಹೊಂದಿರುವ ಹಿರಿಯ ನಾಯಕರ ಜತೆಗೆ ಯುವ ಸಂಸದರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಚಿಂತನೆ ಇದೆ ಎನ್ನಲಾಗಿದೆ. ಇದು ಕೇವಲ ವಯಸ್ಸಿನ ಆಧಾರದ ಬದಲಾವಣೆ ಆಗದೆ, ಮುಂದಿನ ಒಂದು ದಶಕದ ಬಿಜೆಪಿ ನಾಯಕತ್ವವನ್ನು ರೂಪಿಸುವ ಪ್ರಯತ್ನವಾಗಿಯೂ ಕಾಣಬಹುದು. ಇನ್ನು ಕರ್ನಾಟಕದಿಂದ ಯಾರೆಲ್ಲಾ ಮೋದಿ ಸಂಪುಟ ಸೇರುತ್ತಾರೆ? ಯಾರು ಆಚೆ ಬರಹುದು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
