Viral Video: ಇಂಥ ತಾಯಿಯೂ ಇರ್ತಾರಾ! ಮಗನಿಗಿಂತ ಸೀರೆಯೇ ಹೆಚ್ಚಾಯ್ತಾ?

Updated on: Feb 23, 2026 | 11:18 PM

ವೈರಲ್ ಆಗಿರುವ ವಿಡಿಯೋದ ಪ್ರಕಾರ, 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಸೀರೆ 7ನೇ ಮಹಡಿಯ ಬಾಲ್ಕನಿಗೆ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು, ಅವರು ತಮ್ಮ ಮಗನನ್ನು ಮತ್ತೊಂದು ಸೀರೆಯ ಸಹಾಯದಿಂದ ನೇತು ಹಾಕಿದರು. ಅವರು ತಮ್ಮ ಮಗನ ಸೊಂಟಕ್ಕೆ ಸೀರೆಯನ್ನು ಕಟ್ಟಿ, ಅದನ್ನು ಬಿಗಿಯಾಗಿ ಹಿಡಿದು, ಮೂರನೇ ಮಹಡಿಯ ಬಾಲ್ಕನಿಯಲ್ಲಿ ನೇತು ಹಾಕಿದರು. ಗಾಳಿಯಲ್ಲಿ ನೇತಾಡುತ್ತಿದ್ದ ಹುಡುಗ, ಕೆಳಗಿನ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದ ಸೀರೆಯನ್ನು ಹಿಡಿದನು. ಇದರೊಂದಿಗೆ ತಾಯಿ ಹುಡುಗನನ್ನು ಮೇಲಕ್ಕೆ ಎಳೆದಳು.

ನವದೆಹಲಿ, ಫೆಬ್ರವರಿ 23: ನೂರಾರು ರೂಪಾಯಿ ಬೆಲೆಯ ಸೀರೆ ಕೆಳಗೆ ಬಿದ್ದಿದ್ದಕ್ಕೆ ತಾಯಿಯೊಬ್ಬಳು ತನ್ನ ಮಗನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಅಪಾರ್ಟ್​​ಮೆಂಟ್​​ನ 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆ ತನ್ನ ಬಾಲ್ಕನಿಯಿಂದ 7ನೇ ಮಹಡಿಯ ಬಾಲ್ಕನಿಗೆ ಬಿದ್ದಿದ್ದ ತನ್ನ ಸೀರೆಯನ್ನು ಪಡೆಯಲು ತನ್ನ ಮಗನಿಗೆ ಸೀರೆಯನ್ನು ಕಟ್ಟಿ ಕೆಳಗೆ ನೇತಾಡಿಸಿದ್ದಾಳೆ. ಆ ಬಾಲಕ ಆ ಸೀರೆಯನ್ನು ಹಿಡಿದುಕೊಂಡು ಕೆಳಗಿನ ಬಾಲ್ಕನಿಗೆ ಹೋಗಿ ಅಲ್ಲಿ ಬಿದ್ದಿದ್ದ ಅಮ್ಮನ ಸೀರೆಯನ್ನು ತೆಗೆದುಕೊಂಡು ಮತ್ತೆ ಸೀರೆಯಲ್ಲಿ ನೇತಾಡುತ್ತಾ ಮೇಲೆ ಬಂದಿದ್ದಾನೆ. ಅಪ್ಪಿತಪ್ಪಿ ಆ ಮಗುವೇನಾದರೂ ಕೈ ಜಾರಿ ಕೆಳಗೆ ಬಿದ್ದಿದ್ದರೆ ಬದುಕುವ ಸಾಧ್ಯತೆಯಂತೂ ಇರಲೇಇಲ್ಲ ಬಿಡಿ. ಹೀಗಾಗಿ, ಆ ತಾಯಿಗೆ ತನ್ನ ಮಗನ ಪ್ರಾಣಕ್ಕಿಂತ ಸೀರೆಯೇ ಮುಖ್ಯವಾಯಿತಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಘಟನೆಯನ್ನು ಎದುರಿನ ಅಪಾರ್ಟ್​ಮೆಂಟ್​ ನಿವಾಸಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More