MP Renukacharya: ನಿಲ್ದಾಣದಲ್ಲಿ ಟ್ರಾಫಿಕ್ ಕಂಟ್ರೋಲರ್ ನಂತೆ ಓಡಾಡಿ ವಿದ್ಯಾರ್ಥಿಗಳಿಗೆ ಬಸ್ ಹತ್ತಿಸಿದ ಎಂಪಿ ರೇಣುಕಾಚಾರ್ಯ

MP Renukacharya: ನಿಲ್ದಾಣದಲ್ಲಿ ಟ್ರಾಫಿಕ್ ಕಂಟ್ರೋಲರ್ ನಂತೆ ಓಡಾಡಿ ವಿದ್ಯಾರ್ಥಿಗಳಿಗೆ ಬಸ್ ಹತ್ತಿಸಿದ ಎಂಪಿ ರೇಣುಕಾಚಾರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 19, 2023 | 4:47 PM

ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನಿಲ್ದಾಣದಲ್ಲಿ ನಿಂತು ಎಲ್ಲರೂ ಸುರಕ್ಷಿತವಾಗಿ ಬಸ್ ಹತ್ತುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ದಾವಣಗೆರೆ: ಹೊನ್ನಾಳಿಯಲ್ಲಿ ಕಂಡುಬರುತ್ತಿರುವ ಈ ದೃಶ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯ (Shakti Scheme) ಪ್ರಭಾವ ಖಂಡಿತ ಅಲ್ಲ. ಶಾಲಾ ಕಾಲೇಜುಗಳ ವೇಳೆ ಮುಗಿದ ಬಳಿಕ ಎಲ್ಲ ತಾಲ್ಲೂಕು, ಹೋಬಳಿ ಬಸ್ ನಿಲ್ದಾಣಗಳಲ್ಲಿ ಇಂಥ ದೃಶ್ಯ ಕಂಡುಬರುತ್ತದೆ. ನೀವೊಮ್ಮೆ ಗಮನಿಸಿ, ಬಸ್ ಹತ್ತುತ್ತಿರುವರಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಜಾಸ್ತಿ ಇದ್ದಾರೆ. ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ನಿಲ್ದಾಣದಲ್ಲಿ ನಿಂತು ಎಲ್ಲರೂ ಸುರಕ್ಷಿತವಾಗಿ ಬಸ್ ಹತ್ತುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಒಬ್ಬ ಡ್ರೈವರ್ (driver) ಜನ ಇನ್ನೂ ಹತ್ತುತ್ತಿರುವಾಗಲೇ ಬಸ್ಸು ಓಡಿಸಲಾರಂಭಿಸಿದ್ದರಿಂದ ಸಿಡಿಮಿಡಿಗೊಳ್ಳುವ ರೇಣುಕಾಚಾರ್ಯ, ಕ್ಯಾಬಿನ್ ಬಳಿ ಹೋಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ