Loading video

IPL 2025: ಜೈಪುರದಲ್ಲಿ ಧೋನಿಗೆ ವಿಶೇಷ ಗೌರವ ಸಲ್ಲಿಸಿದ ಬಿಸಿಸಿಐ; ವಿಡಿಯೋ

|

Updated on: Mar 30, 2025 | 10:26 PM

MS Dhoni Honored by BCCI: ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025 ಪಂದ್ಯದ ಮುನ್ನ, ಮಾಜಿ ಭಾರತ ನಾಯಕ ಎಂ.ಎಸ್. ಧೋನಿ ಅವರಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. 18 ವರ್ಷಗಳ ಐಪಿಎಲ್ ಅನುಭವಕ್ಕಾಗಿ ಧೋನಿ ಈ ಗೌರವಕ್ಕೆ ಭಾಜನರಾಗಿದ್ದಾರೆ. ಜೈಪುರದಲ್ಲಿ ನಡೆದ ಈ ಸಮಾರಂಭದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025 ರ 11ನೇ ಪಂದ್ಯ ರಾಜಸ್ಥಾನ್ ತಂಡದ ತವರು ಮೈದಾನವಾದ ಬರ್ಸಪರಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್​ಕೆ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. ಇದೀಗ ಅದರ ವಿಡಿಯೋ ಹಾಗೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವಾಸ್ತವವಾಗಿ, ಎಂಎಸ್ ಧೋನಿ 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಅಂದರೆ ಧೋನಿ ಐಪಿಎಲ್ ಆಡಲು ಆರಂಭಿಸಿ 18 ವರ್ಷಗಳಾಗಿವೆ. ಅದಕ್ಕಾಗಿಯೇ ಬಿಸಿಸಿಐ ಧೋನಿಗೆ ಜೈಪುರದಲ್ಲಿ ಸನ್ಮಾನ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಶ್ರೀ ದೇವಜಿತ್ ಸೈಕಿಯಾ ಅವರು ಧೋನಿಗೆ ವಿಶೇಷ ಪುರಸ್ಕಾರ ನೀಡಿ ಗೌರವ ಸಲ್ಲಿಸಿದರು