ವಿಧಾನಸೌಧದಲ್ಲಿ ಶ್ರೀರಾಮನ ಭಜನೆ ಮಾಡುತ್ತ ಧರಣಿ ಕುಳಿತ ಬಿಜೆಪಿ-ಜೆಡಿಎಸ್, ವಿಡಿಯೋ ನೋಡಿ
ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಸ್ಪೀಕರ್ ಯುಟಿ ಖಾದರ್ ಅವರು ಅವಕಾಶ ನೀಡದಿದ್ದಕ್ಕೆ ಬಿಜೆಪಿ ಜೆಡಿಎಸ್ ಶಾಸಕರು ಸಿಡಿದೆದ್ದಿದ್ದು, ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಕುಳಿತ್ತಿದ್ದಾರೆ. ಇನ್ನು ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಶ್ರೀರಾಮನ ಭಜನೆ ಮಾಡಿದರು.
ಬೆಂಗಳೂರು, (ಜುಲೈ 24): ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯೊಳಗೆ ಅಹೋರಾತ್ರಿ ಧರಣೆ ನಡೆಸಿದ್ದಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕರು ಜಂಟಿಯಾಗಿ ಅಹೋರಾತ್ರಿ ಧರಣಿ ಕುಳಿತ್ತಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಾ ರಾಮನ ಭಜನೆ ಮಾಡಿದರು.
ಕಳೆದ ವಾರ ವಾಲ್ಮೀಕಿ ನಿಗಮ ಹಗರಣ ಬಾಣ ಬಿಟ್ಟಿದ್ದ ಬಿಜೆಪಿ, ಇಂದು (ಜುಲೈ 24) ಮುಡಾ ಸೈಟು ಹಂಚಿಕೆ ಹಗರಣದ ಭರ್ಜಿಯನ್ನ ಸರ್ಕಾರದ ಮೇಲೆ ಎಸೆದಿದೆ. ಮುಡಾ ಚರ್ಚೆಗೆ ಅವಕಾಶ ಕೋರಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತ್ತು. ಆದ್ರೆ, ಚರ್ಚೆಗೆ ಅವಕಾಶ ಕೊಡಬೇಕೋ ಬೇಡ್ವೋ ಅನ್ನೋ ವಿಚಾರವಾಗಿ ದೊಡ್ಡ ಕದನವೇ ನಡೆದು ಹೋಯ್ತು. ಅಂತಿಮವಾಗಿ ಇದು ಹಳೆಯ ವಿಚಾರ, ತನಿಖಾ ಆಯೋಗ ರಚನೆಯಾಗಿದೆ ಅಂತೇಳಿ, ನಿಲುವಳಿಯನ್ನ ಸ್ಪೀಕರ್ ಖಾದರ್ ತಿರಸ್ಕರಿಸಿದ್ದು, ಇದೀಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ