Loading video

ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್

|

Updated on: Mar 31, 2025 | 5:25 PM

ನಿನ್ನೆ(ಮಾರ್ಚ್ 30) ಹಿಂದೂಗಳ ಹೊಸ ವರ್ಷ ಯುಗಾದಿ ಮುಗಿದಿದೆ. ಇದರ ಬೆನ್ನಲ್ಲೆ ಇಂದು(ಮಾರ್ಚ್ 31) ಮುಸ್ಲಿಮರು ಪವಿತ್ರ ಹಬ್ಬ ರಂಜಾನ್​​ ಇದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಸಮುದಾಯದವರು ಬೆಳಗ್ಗೆಯೇ ಪ್ರಾರ್ಥನೆ ಮಾಡಿ ಸಿಹಿ ಅಡುಗೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದರ ಮಧ್ಯೆ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಯ ಸೌಂಡ್ ಕಡಿಮೆ ಮಾಡುವಂತೆ ಅವಾಜ್ ಹಾಕಿರುವ ಘಟನೆ ನಡೆದಿದೆ.

ತಮಕೂರು, (ಮಾರ್ಚ್ 31): ನಿನ್ನೆ(ಮಾರ್ಚ್ 30) ಹಿಂದೂಗಳ ಹೊಸ ವರ್ಷ ಯುಗಾದಿ ಮುಗಿದಿದೆ. ಇದರ ಬೆನ್ನಲ್ಲೆ ಇಂದು(ಮಾರ್ಚ್ 31) ಮುಸ್ಲಿಮರು ಪವಿತ್ರ ಹಬ್ಬ ರಂಜಾನ್​​ ಇದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಮುಸ್ಲಿಂ ಸಮುದಾಯದವರು ಬೆಳಗ್ಗೆಯೇ ಪ್ರಾರ್ಥನೆ ಮಾಡಿ ಸಿಹಿ ಅಡುಗೆ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದರ ಮಧ್ಯೆ ಕೆಲ ಮುಸ್ಲಿಂ ಯುವಕರು ದೇವಾಲಯದಲ್ಲಿ ಭಕ್ತಿಗೀತೆಯ ಸೌಂಡ್ ಕಡಿಮೆ ಮಾಡುವಂತೆ ಅವಾಜ್ ಹಾಕಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಿಂಗೇನಹಳ್ಳಿಯಲ್ಲಿ ನಡೆದಿದೆ. ನಿನ್ನೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತಿಗೀತೆ ಹಾಕಲಾಗಿತ್ತು. ಇದರಿಂದ ಕೋಪ ಮುಸ್ಲಿಂ ಯುವಕನೋರ್ವ ಬಂದು ಸೌಂಡ್ ಕಡಿಮೆ ಮಾಡಿ ಎಂದು ಅವಾಜ್ ಹಾಕಿದ್ದಾನೆ. ಬಳಿಕ ಇನ್ನೂ ಕೆಲ ಮುಸ್ಲಿಂ ಯುವಕರು ದೇವಸ್ಥಾನದ ಬಳಿ ಬಂದು ಅವಾಜ್ ಹಾಕಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.